ವಾಟ್ಸಾಪ್ ಗ್ರೂಪ್ ಮಾಡಿ ಪೇಚಿಗೆ ಸಿಲುಕಿದ ಶಾಸಕ ಎಂ.ಕೆ.ಸೋಮಶೇಖರ್..!

ಈ ಸುದ್ದಿಯನ್ನು ಶೇರ್ ಮಾಡಿ

Whatsappa--01

ಮೈಸೂರು, ಜ.8-ಶಾಸಕರೊಬ್ಬರು ವಾಟ್ಸಾಪ್ ಗ್ರೂಪ್ ಮಾಡಿ ಪೇಚಿಗೆ ಸಿಲುಕಿರುವ ಪ್ರಸಂಗ ನಗರದಲ್ಲಿ ನಡೆದಿದೆ.  ಮೈಸೂರಿನ ಕೆ.ಆರ್.ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಕೆ.ಸೋಮಶೇಖರ್ ಅವರೇ ಗ್ರೂಪ್ ಮೂಲಕ ಪೇಚಿಗೆ ಸಿಲುಕಿರುವವರು. ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಅರಿಯಲು ಕೆಲವು ದಿನಗಳ ಹಿಂದಷ್ಟೇ ಶಾಸಕರು ಪಬ್ಲಿಕ್ 7 ಎಂಬ ವಾಟ್ಸಾಪ್ ಗ್ರೂಪ್ ರಚಿಸಿಕೊಂಡಿದ್ದಾರೆ. ಗ್ರೂಪ್‍ನಲ್ಲಿ ಈ ಕ್ಷೇತ್ರದ ಸಾರ್ವಜನಿಕರು ಶಾಸಕರ ವಿರುದ್ಧವೇ ಹಲವು ಕಾಮೆಂಟ್ಸ್‍ಗಳನ್ನು ಹಾಕಿದ್ದಾರೆ. ಶಾಸಕರಾಗಿ ನಾಲ್ಕು ವರ್ಷ ಕಳೆದಿದೆ. ಈಗ ನಿಮಗೆ ನಮ್ಮ ನೆನಪಾಯಿತೇ ಎಂದು ಕೇಳುವುದು ಸೇರಿದಂತೆ ಸಾರ್ವಜನಿಕರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಲೋನ್ ಕೊಡಿಸಿ ಎಂದು ಕೇಳಲು ಬಂದರೆ ಪರಿಚಯ ಇಲ್ಲ ಎಂದು ಹೇಳುವ ನೀವು, ಈಗ ಏಕೆ ಗ್ರೂಪ್‍ಗೆ ಸೇರಿಸಿಕೊಂಡಿದ್ದೀರಿ ಎಂದು ಗರಂ ಆಗಿದ್ದಾರೆ. ಇಷ್ಟು ವರ್ಷ ಸಮಸ್ಯೆ ಅರಿಯಲು ಬಾರದವರು ಇಂದು ಚುನಾವಣೆ ಹತ್ತಿರ ಬರುತ್ತಿದ್ದಂತೆ ನಾವು ನೆನಪಾದೆವೇ ಎಂದು ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿಯವರ ಭಾವಚಿತ್ರವನ್ನೊಬ್ಬರು ಈ ಗ್ರೂಪ್‍ನಲ್ಲಿ ಅಪ್‍ಲೋಡ್ ಮಾಡಿದ್ದರೆ, ಹಲವು ಮಂದಿಯ ಹೆಸರುಗಳನ್ನು ಗ್ರೂಪ್‍ಗೆ ಸೇರಿಸಲಾಗಿದೆ. ಇದರೊಂದಿಗೆ ಗ್ರೂಪ್‍ಗೆ ಸೇರ್ಪಡೆಗೊಂಡ ಹಲವರು ಕೆಲವೇ ಕ್ಷಣಗಳಲ್ಲಿ ಲೆಫ್ಟ್ ಆಗಿದ್ದಾರೆ. ಹಲವಾರು ಮಂದಿ ಶಾಸಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಎಲ್ಲಾ ರೀತಿಯ ಕಾಮೆಂಟ್ ಬಂದ ಹಿನ್ನೆಲೆಯಲ್ಲಿ ಶಾಸಕರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ, ಪ್ರಶ್ನೆಗಳಿಗೂ ಉತ್ತರಿಸದೆ ತಟಸ್ಥರಾಗಿದ್ದಾರೆ.

Facebook Comments

Sri Raghav

Admin