ವಿಶ್ವದ ಒಟ್ಟು ಸಾಲ 233 ಲಕ್ಷ ಕೋಟಿ ಡಾಲರ್..!

ಈ ಸುದ್ದಿಯನ್ನು ಶೇರ್ ಮಾಡಿ

Loan--02

ವಾಷಿಂಗ್ಟನ್,ಜ.8 -ಕಳೆದ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕ ಸಾಲದ ಪ್ರಮಾಣ ದಾಖಲೆ 233 ಲಕ್ಷ ಕೋಟಿ ಡಾಲರ್‍ಗೆ ಏರಿದೆ. ಇದು 2016ರ ಅಂತ್ಯದ ವೇಳೆಗಿದ್ದ ಮೊತ್ತಕ್ಕಿಂತ 16 ಲಕ್ಷ ಕೋಟಿ ಡಾಲರ್ ಅಧಿಕವಾಗಿದೆ ಎಂದು ಇನ್‍ಸ್ಟಿಟ್ಯೂಟ್ ಆಫ್ ಇಂಟರ್ ನ್ಯಾಷನಲ್ ಫೈನಾನ್ಸ್ (ಐಐಎಫï) ನಡೆಸಿದ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಖಾಸಗಿ, ಹಣಕಾಸಿನೇತರ ರಂಗದ ಸಾಲದ ಪ್ರಮಾಣವು ಕೆನಡಾ, ಫ್ರಾನ್ಸ್, ಹಾಂಗ್‍ಕಾಂಗ್, ದಕ್ಷಿಣ ಕೊರಿಯಾ, ಸ್ವಿರ್ಝಲ್ಯಾಂಡï ಹಾಗೂ ಟರ್ಕಿಯಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಆರ್ಥಿಕ ಪ್ರಗತಿಯ ಪ್ರಮಾಣ ಏರಿಕೆಯಾಗುತ್ತಿದ್ದಂತೆಯೇ ಸಾಲ ಹಾಗೂ ಜಿಡಿಪಿ ಅನುಪಾತ ನಾಲ್ಕನೇ ತ್ರೈಮಾಸಿಕದಲ್ಲೂ ಕುಸಿತ ಕಂಡಿದೆ. ಸದ್ಯ ಈ ಅನುಪಾತ 218 ಶೇಕಡಾ ಆಗಿದ್ದು 2016ರ ಮೂರನೇ ತ್ರೈಮಾಸಿಕದಲ್ಲಿ ನಿಗದಿಪಡಿಸಲಾದ ಗರಿಷ್ಠ ಪ್ರಮಾಣಕ್ಕಿಂತ ಶೇ.3ರಷ್ಟು ಅಂಕಗಳು ಕಡಿಮೆಯಾಗಿದೆ ಎಂದು ಐಐಎಫ್ ತಿಳಿಸಿದೆ.

ವಿಶ್ವ ಸಂಸ್ಥೆಯ ಅಂಕಿಸಂಖ್ಯೆಗಳ ಪ್ರಕಾರ ಜಾಗತಿಕ ಜನಸಂಖ್ಯೆ 760 ಕೋಟಿಯಷ್ಟಾಗಿದ್ದರೆ ವಿಶ್ವದ ಜನಸಂಖ್ಯೆಯ ತಲಾ ಸಾಲದ ಮೊತ್ತ 30,000 ಡಾಲರ್ ಆಗಿದೆ. ಏರಿಕೆಯಾದ ಜಾಗತಿಕ ಸಾಲದ ಪ್ರಮಾಣದಿಂದಾಗಿ ಸಾಲದ ಮೇಲಿನ ಬಡ್ಡಿ ದರಗಳನ್ನು ಏರಿಸುವ ಕೇಂದ್ರೀಯ ಬ್ಯಾಂಕುಗಳ ಪ್ರಸ್ತಾವನೆಗೆ ಬ್ರೇಕ್‍ಬಿದ್ದಂತಾಗಿದೆ. ಬಡ್ಡಿ ದರ ಏರಿಸಿದ್ದೇ ಆದಲ್ಲಿ ಈಗಾಗಲೇ ಸಾಲದಲ್ಲಿ ಮುಳುಗಿರುವ ಸಂಸ್ಥೆಗಳು ಹಾಗೂ ಸರಕಾರಗಳು ಸಾಲ ಮರುಪಾವತಿಸಲು ಹೆಣಗಾಡಬೇಕಾದೀತು ಎಂದು ಹೇಳಿದೆ.

Facebook Comments

Sri Raghav

Admin