ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರುವ ‘ಮದರ್ ಸವಿತಾ’

ಈ ಸುದ್ದಿಯನ್ನು ಶೇರ್ ಮಾಡಿ

mother-savitha
ಈ ಹಿಂದೆ ಪ್ರೀತಿಯಿಂದ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ರಾಜು ಹಲಗೂರು ಈಗ ಸದ್ದಿಲ್ಲದೆ ಮತ್ತೊಂದು ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಈ ಸಲ ಅವರು ಎಚ್‍ಐವಿ ಪೀಡಿತರ ಬಗ್ಗೆ ಕಾಳಜಿ ವಹಿಸಿ ಆ ಬಗ್ಗೆ ಸಾಕಷ್ಟು ರೀಸರ್ಚ್ ಮಾಡಿ ಕಥಾಹಂದರ ಹೆಣೆದಿದ್ದಾರೆ. ಮದರ್ ಸವಿತಾ ಎಂಬ ಹೆಸರಿನ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದು ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಒಂದು ಥೀಮ್‍ಸಾಂಗ್ ಮಾತ್ರವಿದ್ದು, ಸುರೇಶ್‍ ಚಂದ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹೆಚ್‍ಐವಿ ಪೀಡಿತ ಮಂಗಳ ಮುಖಿ ಸಂಜೀವ್ ಹಾಗೂ ಪಲ್ಲವಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಿರಿಯ ನಟಿ ಅಭಿನಯ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದು ಉಳಿದ ಪಾತ್ರಗಳಲ್ಲಿ ಮಾನಸ ದೀಪಕ್‍ದತ್ತ ಹಾಗೂ ಇತರರು ಕಾಣಿಸಿಕೊಂಡಿದ್ದಾರೆ.

ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಹಾಗೂ ನಿರ್ಮಾಪಕ ರಾಜು ಹಲಗೂರು ಎಚ್‍ಐವಿ ಬೇಸ್ ಮಾಡಿಕೊಂಡು ನಿರ್ಮಿಸಿದಂಥ ಚಿತ್ರವಿದು. ನಮ್ಮ ದೇಶದಲ್ಲಿ 3.5 ಲಕ್ಷ ಜನ ಎಚ್‍ಐವಿ ಪೀಡಿತ ರೋಗಿಗಳಿದ್ದಾರೆ. ಇದರ ಬಗ್ಗೆ ಇರುವ ಮೂಢನಂಬಿಕೆಯನ್ನು ತೊಡೆದು ಹಾಕಬೇಕು ಎನ್ನುವುದೇ ಈ ಚಿತ್ರದ ಉದ್ದೇಶ ಎಂದರು. ನಾಗರಾಜ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದು, ಪಾಟೀಲ್ ಸಹ ನಿರ್ಮಾಪಕರಾಗಿದ್ದಾರೆ. ಎಚ್‍ಐವಿ ಪೀಡಿತರಾದ ಸಂಜೀವ್ ಮಾತನಾಡಿ, ಸಮಾಜದಲ್ಲಿ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೆವೆ. ಇದರ ಬಗ್ಗೆ ಇರುವ ಮೂಢನಂಬಿಕೆ ಜನರಲ್ಲಿ ಮಾಯವಾಗಬೇಕು ಎಂದು ಹೇಳಿದರು. ಮಂಗಳಮುಖಿ ಸವಿತಾ ಕೂಡ ಮಾತನಾಡಿದರು.

Facebook Comments

Sri Raghav

Admin