ಇದೇ 12ರಂದು ಏಕಕಾಲದಲ್ಲಿ 31 ಉಪಗ್ರಹಗಳ ಉಡಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

Isro--02

ಬೆಂಗಳೂರು, ಜ.9- ಪಿಎಸ್‍ಎಲ್‍ವಿಸಿ-40 ಖಗೋಳ ವಾಹನದ ಮೂಲಕ ಇದೇ 12ರಂದು 9.30ಕ್ಕೆ 31 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಲಾಗುತ್ತಿದೆ ಎಂದು ಇಸ್ರೋ ಸ್ಯಾಟಲೈಟ್ ಕೇಂದ್ರದ ನಿರ್ದೇಶಕ ಡಾ.ಎಂ.ಅಣ್ಣಾದೊರೈ ತಿಳಿಸಿದರು. ನಗರದ ಜವಾಹರ್‍ಲಾಲ್ ತಾರಾಲಯದಲ್ಲಿ ಆಯೋಜಿಸಿದ್ದ ಆಸ್ಟ್ರೋಸ್ಯಾಟ್‍ನ ಎರಡು ದಿನಗಳ ಪ್ರಗತಿ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೇ 12ರಂದು ಪಿಎಸ್‍ಎಲ್‍ವಿಸಿ-40 ಮೂಲಕ 31 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾಯಿಸಲಾಗುತ್ತಿದೆ. ಇದರಲ್ಲಿ 28 ನ್ಯಾನೋ ಉಪಗ್ರಹಗಳಿದ್ದರೆ, ಒಂದು ಕ್ಯಾಟೋಸ್ಟಾರ್ಟ್, ಮೂರು ಭಾರತೀಯ ಉಪಗ್ರಹಗಳು ಸೇರಿವೆ. 28 ನ್ಯಾನೋ ಉಪಗ್ರಹಗಳು ವಿದೇಶಿಯದ್ದಾಗಿವೆ ಎಂದು ಮಾಹಿತಿ ನೀಡಿದರು. ಕಳೆದ ಆಗಸ್ಟ್‍ನಲ್ಲಿ ಪಿಎಸ್‍ಎಲ್‍ವಿಸಿ-39 ಉಡಾವಣೆಗೆ ಪ್ರಯತ್ನಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಅದು ವಿಫಲವಾಯಿತು. ಈ ಬಾರಿ ಖಗೋಳ ವಾಹನ ಉಡಾವಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

2015ನ್ನು ಭಾರತೀಯ ತಂತ್ರಜ್ಞಾನದ ಕೈಗನ್ನಡಿ ಎಂದೇ ಹೇಳಬಹುದು. ಅಂದು ಆಸ್ಟ್ರೋಸ್ಯಾಟ್‍ಅನ್ನು ಉಡಾವಣೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಸಂಸ್ಥೆ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು.2015ರ ಸೆಪ್ಟೆಂಬರ್ 28ರಂದು ಆಸ್ಟ್ರೋಸ್ಯಾಟ್‍ಅನ್ನು ಉಡಾಯಿಸಲಾಗಿತ್ತು. ಈ ಮೂರು ವರ್ಷಗಳಲ್ಲಿ ಅದರಿಂದ ಆಗಿರುವ ಪ್ರಗತಿ, ಸಾಧನೆ ಬಗ್ಗೆ ಖಗೋಳ ವಿಜ್ಞಾನಿಗಳು ನಡೆಸಿರುವ ಅಧ್ಯಯನವನ್ನು ಶಾಲಾ ಮಕ್ಕಳಿಗೆ ತಿಳಿಸಿಕೊಡಲು ಈ ಪ್ರದರ್ಶನ ಅನುಕೂಲವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಡಾ.ದಿವಾಕರ್, ಡಾ.ಮಧುಸೂದನ್ ಕಾರ್ನಿಕ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin