ಎಣ್ಣೆ ಪ್ರಿಯರ ಮನಗೆದ್ದ ‘ಓಲ್ಡ್ ಮಾಂಕ್’ ಸೃಷ್ಟಿಕರ್ತ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

 

Old-Monk--02

ಘಾಜಿಯಾಬಾದ್, ಜ.9-ರಮ್‍ಪ್ರಿಯರ ಅಚ್ಚು ಮೆಚ್ಚಿನ ಸಂಗಾತಿ ಓಲ್ಡ್ ಬಾಂಕ್ ಬ್ರಾಂಡ್ ಸೃಷ್ಟಿಕರ್ತ, ಖ್ಯಾತ ಉದ್ಯಮಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ನಿವೃತ್ತ ಬ್ರಿಗೇಡಿಯರ್ ಡಾ. ಕಪಿಲ್ ಮೋಹನ್ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉತ್ತರ ಪ್ರದೇಶದ ಘಾಜಿಯಾಬಾದ್‍ನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಬ್ರವರಿ ಮೋಹನ್ ಮಿಯಾಕಿನ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅವರು ಡಿಸೆಂಬರ್ 19, 1954ರಲ್ಲಿ ಓಲ್ಡ್ ಮಾಂಕ್ ರಮ್‍ನನ್ನು ಮಧುಲೋಕಕ್ಕೆ ಪರಿಚಯಿಸಿದರು. ಪ್ರತಿಷ್ಠಿತ ಸಂಸ್ಥೆಗಳ ಬ್ರಾಂಡ್‍ಗಳಿಗೆ ಸರಿಸಮನಾಗಿ ಪೈಪೆÇೀಟಿ ನೀಡಿರುವ ಓಲ್ಡ್ ಮಾಂಕ್‍ನ ಬಾಟಲ್ ವಿನ್ಯಾಸ ಮತ್ತು ಒಗರು ರುಚಿ ಪಾನಪ್ರಿಯರನ್ನು ಮೋಡಿ ಮಾಡಿದೆ. ಉದ್ಯಮ ಕ್ಷೇತ್ರಕ್ಕೆ ನೀಡಿದ ಸೇವೆಗಳಾಗಿ 2010ರಲ್ಲಿ ಇವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Facebook Comments

Sri Raghav

Admin