ಎಲೆಕ್ಷನ್ ಗಿಮಿಕ್ ಉದ್ಯೋಗ ಮೇಳದಲ್ಲಿ ಉದ್ಯೋಗ ಸಿಗದೆ ನಿರುದ್ಯೋಗಿಗಳಿಗೆ ನಿರಾಸೆ

ಈ ಸುದ್ದಿಯನ್ನು ಶೇರ್ ಮಾಡಿ

Udyoaga-Mela--02

ತುಮಕೂರು, ಜ.9-ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಉದ್ಯೋಗ ಮೇಳಕ್ಕೆ ಬೆಳಗ್ಗಿನಿಂದ ರಾತ್ರಿಯವರೆಗೂ ಸರತಿ ಸಾಲಿನಲ್ಲಿ ನಿಂತು ಕಾದರೂ ಉದ್ಯೋಗ ದೊರಕದೆ ಸಪ್ಪೆ ಮೋರೆ ಹಾಕಿದ ಸ್ಥಿತಿ ಬಹುತೇಕ ನಿರುದ್ಯೋಗಿಗಳಲ್ಲಿ ಕಂಡು ಬಂತು. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಏರ್ಪಡಿಸಿದ್ದ ಕೌಶಲ್ಯ ಮತ್ತು ಬೃಹತ್ ಉದ್ಯೋಗ ಮೇಳ ಕೇವಲ ಚುನಾವಣಾ ಗಿಮಿಕ್ಕಾಗಿ ಮಾರ್ಪಾಟಾಗಿತ್ತು. ಸರ್ಕಾರದ ಹಣದಲ್ಲಿ ಲಕ್ಷಗಟ್ಟಲೆ ಹಣ ವ್ಯಯಿಸಿ ನಡೆಸಿದ ಈ ಉದ್ಯೋಗ ಮೇಳ ಹಾಲಪ್ಪನವರ ತಿಜೋರಿ ತುಂಬಿಸಲೇ ಎಂಬಂತ್ತಿತ್ತು.

ಮೇಳದಲ್ಲಿ ಬಹುತೇಕ ಏಜೆನ್ಸಿಗಳು ಬಟ್ಟೆ ಅಂಗಡಿಗಳ ಉದ್ಯೋಗ, ರಾಜಕಾರಣಿಗಳ ಖಾಸಗಿ ಸರ್ವೆ, ವಿಮಾ ಕಂಪನಿಗಳ ಏಜೆಂಟರು, ಖಾಸಗಿ ಹಣಕಾಸು ಸಂಸ್ಥೆಗಳು ನೀಡುವ ಬಡ್ಡಿ ಹಣವನ್ನು ವಸೂಲಿ ಮಾಡಲು ಬೇಕಾದ ಕಾರ್ಮಿಕ ವರ್ಗ ಮತ್ತು ಕೆಲಸ ಕೊಡಿಸುತ್ತೇವೆಂದು ವಂಚಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು. ಬಡ್ಡಿ ದಂಧೆಯ ವ್ಯವಹಾರದಂತಹ ಕಂಪನಿಗಳು ಇಂತಹ ಹಲವಾರು ಸದ್ಬಳಕೆಯಾಗದ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು.

ಈ ಉದ್ಯೋಗ ಮೇಳವನ್ನು ನಿಭಾಯಿಸಲು ಬಹುದೊಡ್ಡ ಸಂಸ್ಥೆಗೆ ಹಣಕಾಸನ್ನು ನೀಡಿ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡುತ್ತಿದ್ದಾರೆ. ಕನಿಷ್ಠ ಯಾವುದೇ ವಿದೇಶಿ ಕಂಪನಿಗಳಾಗಲಿ ಅಥವಾ ಉತ್ತಮ ಗುಣಮಟ್ಟದ ಸಂಸ್ಥೆಗಳಾಗಲಿ, ಕಾರ್ಖಾನೆಗಳಾಗಲಿ ಈ ಮೇಳದಲ್ಲಿ ಕಾಣಲಿಲ್ಲವೆಂಬುದೇ ಈ ನಾಡಿನ ಜನರ ದುರಂತ. ಇದಕ್ಕಾಗಿ ಸರ್ಕಾರದ ಹಣವನ್ನು ದುರುಪಯೋಗಪಡಿಸಬೇಕಿತ್ತೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿಬಂದಿತ್ತು. ಜನಸಾಮಾನ್ಯರಿಗೆ ಶಾಶ್ವತ ಉದ್ಯೋಗ ಕಲ್ಪಿಸಲಾಗದ ಈ ಉದ್ಯೋಗ ಮೇಳದ ಅನಿವಾರ್ಯತೆ ನಿರುದ್ಯೋಗಿಗಳಿಗಿರಲಿಲ್ಲವೇ ಇದರ ಅವಶ್ಯಕತೆ ಗುತ್ತಿಗೆ ಪಡೆದ ಸಂಸ್ಥೆ ಮತ್ತು ಗುತ್ತಿಗೆ ನೀಡಿದ ನಿಗಮ ಹಾಗೂ ಪ್ರಚಾರ ಪ್ರಿಯ ಹಾಲಪ್ಪನವರಿಗೆ ಮಾತ್ರ ಅಗತ್ಯತೆ ಇತ್ತೇನೋ ಎಂಬುದು ಅಲ್ಲಿನ ಕೆಲವರ ವಾದ ಹೀಗಿರುವಾಗ ಇಲ್ಲಿ ನಡೆದ ಉದ್ಯೋಗ ಮೇಳ, ಅದರ ಹಣದ ದುರುಪಯೋಗ ಆ ಕಾರ್ಯಕ್ರಮದಲ್ಲಾದ ಅನಾಚಾರಗಳ ಮತ್ತು ಅಕ್ರಮಗಳ ಬಗ್ಗೆ ವಿರೋಧ ಪಕ್ಷಗಳು ಧ್ವನಿಎತ್ತದಿರವುದು ವಿಪರ್ಯಾಸವೇ ಸರಿ.

Facebook Comments

Sri Raghav

Admin