ಏಪ್ರಿಲ್-ಡಿಸೆಂಬರ್‍ ಅವಧಿಯಲ್ಲಿ 6.56 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Tax--02

ನವದೆಹಲಿ, ಜ.9-ಪ್ರಸಕ್ತ ಹಣಕಾಸು ವರ್ಷ ಮೊದಲ ಒಂಭತ್ತು ತಿಂಗಳ ಅವಧಿಯಲ್ಲಿ 6.56 ಲಕ್ಷ ಕೋಟಿ ರೂ.ಗಳಷ್ಟು ನೇರ ತೆರಿಗೆ ಸಂಗ್ರಹಗೊಂಡಿದ್ದು, ಶೇ.18.2ರಷ್ಟು ಏರಿಕೆ ಕಂಡುಬಂದಿದೆ. ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸಂಗ್ರಹಗೊಂಡ ನೇರ ತೆರಿಗೆ ಬಗ್ಗೆ ಹಣಕಾಸು ಸಚಿವಾಲಯ ಇಂದು ಅಧಿಕೃತ ಅಂಕಿ ಅಂಶ ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆಗಳ ಒಟ್ಟು ಬಜೆಟ್ ಅಂದಾಜು 9.8 ಲಕ್ಷ ಕೋಟಿ ರೂ.ಗಳಾಗಿದ್ದು, ಮೊದಲ ಒಂಭತ್ತು ತಿಂಗಳ ಅವಧಿಯಲ್ಲಿ 6.56 ಲಕ್ಷ ಕೋಟಿ ರೂ.ಗಳು ಈ ರೂಪದಲ್ಲಿ ಕ್ರೋಢೀಕರಣವಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ವ್ಯಕ್ತಿಗಳು ಪಾವತಿಸುವ ಆದಾಯ ತೆರಿಗೆ, ಹಾಗೂ ಕಂಪನಿಗಳಿಂದ ಪಾವತಿಸುವ ಸಂಪತ್ತು ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಯನ್ನು ನೇರ ತೆರಿಗೆಗಳೆಂದು ಪರಿಗಣಿಸಲಾಗುತ್ತದೆ.

Facebook Comments

Sri Raghav

Admin