ಜ.24ರಂದು ಚುನಾವಣೆ : ಯಾರಾಗಲಿದ್ದಾರೆ ಮೈಸೂರು ಪಾಲಿಕೆಯ ಮೇಯರ್- ಉಪಮೇಯರ್ ..?

ಈ ಸುದ್ದಿಯನ್ನು ಶೇರ್ ಮಾಡಿ

mysuru

ಮೈಸೂರು, ಜ.9- ಮೈಸೂರು ಮಹಾನಗರ ಪಾಲಿಕೆಗೆ ಜ.24ರಂದು ನಡೆಯಲಿರುವ ಮಹಾಪೌರ- ಉಪಮಹಾಪೌರ ಚುನಾವಣೆ ತೀವ್ರ ಕುತೂಹಲ ಕೆರಳಿಸಿದ್ದು, ಮೇಯರ್ ಪಟ್ಟದ ಅದೃಷ್ಟಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದನ್ನು ಕಾದು ನೋಡಬೇಕಿದೆ. ಪ್ರಸಕ್ತ ಅವಧಿಯ ಕೊನೆ ವರ್ಷದ ಚುನಾವಣೆ ಇದಾಗಿದ್ದು, ಮಹಾಪೌರ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಉಪಮಹಾಪೌರ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ನಿಗದಿಪಡಿಸಲಾಗಿದೆ.

50ನೆ ವಾರ್ಡ್‍ನ ಕಮಲಾ ಉದಯ್ ಹಾಗೂ 23ನೆ ವಾರ್ಡ್‍ನ ಭಾಗ್ಯವತಿ ಅವರ ನಡುವೆ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ , ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷ ಇವರಿಬ್ಬರಲ್ಲಿ ಯಾರಿಗೆ ಒಲಿಯಲಿದೆಯೋ ಅವರೇ ಮುಂದಿನ ಮೇಯರ್ ಆಗಲಿದ್ದಾರೆ. ಹಾಗಾಗಿ ಮೇಯರ್ ಚುನಾವಣೆ ತೀವ್ರ ಆಸಕ್ತಿ ಮೂಡಿಸಿದೆ.

ಕಳೆದ ನಾಲ್ಕು ವರ್ಷಗಳಿಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಪಾಲಿಕೆ ಆಡಳಿತ ನಡೆಯುತ್ತಿದೆ. ಆದರೆ, ಬಿಜೆಪಿಯಲ್ಲಿ ಮೇಯರ್-ಉಪಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಪರಿಶಿಷ್ಟ ಪಂಗಡ ಮಹಿಳೆ ಯಾರೂ ಇಲ್ಲದ ಕಾರಣ ಪ್ರಸಕ್ತ ಆಡಳಿತ ಅವಧಿಯ ಕೊನೆಯ ವರ್ಷದ ಮಹಾಪೌರ ಸ್ಥಾನ ನಿರಾಯಾಸವಾಗಿ ಕಾಂಗ್ರೆಸ್ ಪಾಲಿಗೆ ದಕ್ಕಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಪಾಲಿಕೆ ಆಡಳಿತ ನಡೆಯಬೇಕಿದೆ. ಮೇಯರ್ ಸ್ಥಾನ ಕಾಂಗ್ರೆಸ್‍ಗೂ, ಉಪಮೇಯರ್ ಸ್ಥಾನ ಜೆಡಿಎಸ್‍ಗೂ ಲಭ್ಯವಾಗಲಿದೆ. ಉಪಮಹಾಪೌರ ಸ್ಥಾನಕ್ಕೆ ಜೆಡಿಎಸ್‍ನಿಂದ ಏಕೈಕ ಮಹಿಳೆ 61ನೆ ವಾರ್ಡ್‍ನ ಇಂದಿರಾ ಮಹೇಶ್ ಇರುವುದರಿಂದ ಅವರೇ ಆಯ್ಕೆಯಾಗಲಿದ್ದಾರೆ.

Facebook Comments

Sri Raghav

Admin