ದೀಪಕ್ ಕೊಲೆ ಸತ್ಯವನ್ನು ಸರ್ಕಾರ ಮುಚ್ಚಿಡುತ್ತಿದೆ : ಎಚ್‍ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--02

ಬೆಂಗಳೂರು, ಜ.9- ನಾನು ಯುಟರ್ನ್ ಮಾಡುತ್ತಿಲ್ಲ. ಆದರೆ ಮಂಗಳೂರು ಗಲಭೆ, ದೀಪಕ್ ಕೊಲೆ ಪ್ರಕರಣದಲ್ಲಿ ಸರ್ಕಾರ ಸತ್ಯ ಹೊರ ಹಾಕುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.  ಬಂಧಿತರಿಂದ ಯಾಕೆ ಮಾಹಿತಿ ಪಡೆಯುತ್ತಿಲ್ಲ. ನಾನು ಬಿಜೆಪಿ ಕಾರ್ಪೊರೇಟರ್ ಶಾಮೀಲಾಗಿರುವ ಬಗ್ಗೆ ಹೇಳಿದ್ದೇನೆ. ಆದರೆ ಕಾರ್ಪೊರೇಟರ್ ಹೆಸರನ್ನು ಹೇಳಿಲ್ಲ. ಬದಲಿಗೆ ಅವರೇ ಮಾಧ್ಯಮಗಳ ಮುಂದೆ ಹೇಳಿಕೊಳ್ಳುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದರು. ನಾನು ಹಿಟ್ ಅಂಡ್ ರನ್ ಮಾಡುತ್ತಿಲ್ಲ. ಇದನ್ನು ಮಾಡುತ್ತಿರುವುದು ಬಿಜೆಪಿಯವರು. ಸರ್ಕಾರದ ಹಗರಣವನ್ನು ಬಯಲಿಗೆಳೆಯಲು ಹೋಗಿ ಹಿಟ್ ಅಂಡ್ ರನ್ ಆಗ್ತಾ ಇದ್ದಾರೆ ಎಂದು ಟೀಕಿಸಿದರು. ಕಲ್ಲಪ್ಪ ಅಂಗಡಿ ಪ್ರಕರಣದ ವಿಚಾರವಾಗಿ ಮಾತನಾಡುವಾಗ ಶೆಟ್ಟರ್ ಎಲ್ಲಿ ಹೋಗಿದ್ದರು. ಕಾಂಗ್ರೆಸ್‍ನವರಿಗೆ ಮಂಗಳೂರಿನಲ್ಲಿ ಶಾಂತಿ ನೆಲೆಸಬೇಕಿಲ್ಲ. ಈ ಈ ಇಬ್ಬರು ರಾಜಕೀಯ ಪಕ್ಷಗಳಿಗೆ ಬೇಕಾಗಿರುವುದು ರಾಜಕೀಯ ಮಾತ್ರ ಎಂದರು.

ಬ್ರಿಟನ್ ಹೈ ಕಮಿಷನ್ ಭೇಟಿ: ನಮ್ಮ ರಾಜ್ಯದ ರಾಜಕೀಯ ಸ್ಥಿತಿ ಬಗ್ಗೆ ಚರ್ಚಿಸಲು ತಮ್ಮನ್ನು ಬ್ರಿಟನ್ ಹೈ ಕಮಿಷನ್ ಪ್ರತಿನಿಧಿಗಳು ಭೇಟಿ ಮಾಡಿದ್ದರು. ಮಾಹಿತಿಯನ್ನು ವಿನಿಮಯ ಮಾಡಿದರು. ಪ್ರಪಂಚದ ಹಲವು ದೇಶಗಳಲ್ಲಿ ಕರ್ನಾಟಕದ ರಾಜಕೀಯದ ಬಗ್ಗೆ ಸಾಕಷ್ಟು ಕುತೂಹಲವಿದೆ ಎಂದರು. ಮಾಜಿ ಸಚಿವ ನಾಣಯ್ಯ ಅವರು ಪಕ್ಷ ಬಿಡುವ ವಿಚಾರವಾಗಿ ಮಾಹಿತಿಗಳು ಬರುತ್ತಿವೆ. ಆದರೆ ಅಗತ್ಯ ಕಂಡು ಬಂದರೆ ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Facebook Comments

Sri Raghav

Admin