ಪ್ರಗತಿ ಮೈದಾನ ಲಂಚ ಹಗರಣದಲ್ಲಿ ಕ್ಯಾಪಸಿಟಿ ಸ್ಟ್ರಕ್ಚರ್ಸ್ ಎಂಡಿಗೆ ಜಾಮೀನು

ಈ ಸುದ್ದಿಯನ್ನು ಶೇರ್ ಮಾಡಿ

Pragati-Maidan-02ನವದೆಹಲಿ, ಜ.9-ರಾಜಧಾನಿ ದೆಹಲಿಯ ಪ್ರಗತಿ ಮೈದಾನದ ಐಟಿಪಿಒ ಸಂಕೀಣವನ್ನು 2,150 ಕೋಟಿ ರೂ.ವೆಚ್ಚದಲ್ಲಿ ಪುನಃಶ್ಚೇತನಗೊಳಿಸುವ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಗರಣದಲ್ಲಿ ಕ್ಯಾಪಸಿಟಿ ಸ್ಟ್ರಕ್ಚರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕುಲಕರ್ಣಿಗೆ ದೆಹಲಿ ನ್ಯಾಯಾಲಯವೊಂದು ಇಂದು ಜಾಮೀನು ನೀಡಿದೆ.  ಎನ್‍ಬಿಸಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನೂಪ್ ಮಿತ್ತಲ್ ಸಹ ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ. ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರು ಕುಲಕರ್ಣಿಗೆ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಜಾಮೀನು ಮೇರೆಗೆ ಬೇಲ್ ನೀಡಿದರು. ಇದೇ ಪ್ರಕರಣದಲ್ಲಿ ಮಧ್ಯವರ್ತಿಯಾಗಿರುವ ರಿಷಬ್ ಅಗರ್‍ವಾಲ್‍ಗೆ ನಿನ್ನೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

Facebook Comments

Sri Raghav

Admin