ಫೇಸ್‍ಬುಕ್, ಟ್ವೀಟರ್‍ನಿಂದಲೂ ಎಲ್‍ಪಿಜಿ ಸಿಲಿಂಡರ್ ಬುಕ್ ಮಾಡಬಹುದು..!

ಈ ಸುದ್ದಿಯನ್ನು ಶೇರ್ ಮಾಡಿ

LPG-02

ನವದೆಹಲಿ, ಜ.9-ಎಲ್‍ಪಿಜಿ ಗ್ರಾಹಕರು ಇನ್ನು ಮುಂದೆ ಫೇಸ್‍ಬುಕ್ ಮತ್ತು ಟ್ವೀಟರ್‍ನಿಂದಲೂ ಅಡುಗೆ ಅನಿಲ ಬುಕ್ ಮಾಡಬಹುದು ! ಇಷ್ಟು ದಿನ ಫೋನ್ ಮತ್ತು ಎಸ್‍ಎಂಎಸ್ ಮೂಲಕ ಲಭಿಸುತ್ತಿದ್ದ ಈ ಸೌಲಭ್ಯವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೂ ವಿಸ್ತರಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟೈಸೇಷನ್‍ನಿಂದ ಪ್ರಭಾವಿತವಾಗಿರುವ ಭಾರತೀಯ ತೈಲ ನಿಗಮ (ಐಒಸಿ)ತನ್ನ ನೂತನ ಡಿಜಿಟಲ್ ಬುಕಿಂಗ್ ಸರ್ವಿಸ್ ಆರಂಭಿಸಿದೆ. ಈ ಮೂಲಕ ಸೋಷಿಯಲ್ ಮೀಡಿಯಾ ಪ್ಲಾಟ್‍ಫಾರಂಗಳ ಮೂಲಕ ರೀಫಿಲ್ ಬುಕಿಂಗ್‍ನನ್ನ ಪರಿಚಯಿಸಿದ ಪ್ರಥಮ ತೈಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪಾತ್ರವಾಗಿದೆ.

ಗ್ರಾಹಕರಿಗೆ ಎಲ್‍ಪಿಜಿ ಸಿಲಿಂಡರ್‍ಗಳು ಮತ್ತಷ್ಟು ಸುಲಭವಾಗಿ ಲಭಿಸುವಂತಾಗಲು ಐಒಸಿ ಈ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಟೆಲಿಫೋನ್ ಮತ್ತು ಮೇಸೆಜ್ ಸೇವೆಗಳನ್ನು ಬಳಸಿ ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್‍ಪಿಜಿ) ಸಿಲಿಂಡರ್‍ಗಳನ್ನು ಗ್ರಾಹಕರು ಬುಕ್ ಮಾಡುತ್ತಿದ್ದರು. ಇದರೊಂದಿಗೆ ಫೇಸ್‍ಬುಕ್ ಮತ್ತು ಟ್ವೀಟರ್‍ಗಳ ಮುಖಾಂತರ ಹೆಚ್ಚುವರಿ ಸೇವೆ ಲಭಿಸಿದಂತಾಗಿದೆ. ಹೇಗೆ ಬುಕ್ ಮಾಡಬಹುದು ?
ಫೇಸ್ ಬುಕ್ ಮೂಲಕ ಈ ಕೆಳಕಂಡ ರೀತಿಯಲ್ಲಿ ಬುಕ್ ಮಾಡಬಹುದು:- ಫೇಸ್‍ಬುಕ್‍ಗೆ ಲಾಗಿನ್ ಆಗಿ. ಐಒಸಿಎಲ್‍ನ ಅಧಿಕೃತ ಫೇಸ್‍ಬುಕ್  @indianoilcorplimited ಇಲ್ಲಿ ಹೋಗಿ. ಬುಕ್ ನೌ ಪ್ರೆಸ್ ಮಾಡಿ.
ಟ್ವೀಟರ್ ಮುಖಾಂತರ ಹೀಗೆ ಬುಕ್ ಮಾಡಬಹುದು:- Tweetrefill@indanerefill  ಇಲ್ಲಿ ಈ ಸೌಲಭ್ಯ ಲಭ್ಯವಿದೆ.

Facebook Comments

Sri Raghav

Admin