ಮತ್ತೆ ಹೊಸ ಎತ್ತರಕ್ಕೆ ಮುಂಬೈ ಷೇರುಪೇಟೆ

Sensex
ಮುಂಬೈ, ಜ.9-ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್‍ಇ) ಇಂದು ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿದೆ. ಇದರಿಂದ ಸತತ ಆರನೇ ವಾರವೂ ಸೂಚ್ಯಂಕದಲ್ಲಿ ಏರುಮುಖ ಚಲನೆ ಮುಂದುವರಿದಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಬಿಎಸ್‍ಇ 34,487.52ರ ಸಾರ್ವಕಾಲಿಕ ಮಟ್ಟ ತಲುಪಿದ್ದು, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ(ಎನ್‍ಎಸ್‍ಇ) ನಿಫ್ಟಿ ಮೊದಲ ಬಾರಿಗೆ 10,659.15 ಅಂಶಗಳಿಗೆ ಏರಿಕೆಯಾಗಿದೆ.
ದೇಶಿ ಮತ್ತು ವಿದೇಶಿ ಹೂಡಿಕೆ ಹೆಚ್ಚಾಗಿರುವುದು, ಸೇವಾ ವಲಯ ಪ್ರಗತಿಯು ಸಕಾರಾತ್ಮಕ ವಹಿವಾಟು ಸಾಗುವಂತೆ ಮಾಡಿವೆ. ಔಷಧಿ, ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಷೇರುಗಳ ಉತ್ತಮ ಖರೀದಿ ವಹಿವಾಟಿಯಿಂದ ಈ ಹೊಸ ಏರಿಕೆ ಕಂಡುಬಂದಿವೆ. ಕೋಲ್ ಇಂಡಿಯಾ, ಟಾಟಾ ಮೋಟಾರ್ಸ್ ಮತ್ತು ಎಸ್‍ಬಿಐ ಷೇರುಗಳು ಇಂದು ಆರಂಭದಿಂದಲೂ ಉತ್ತಮ ಏರಿಕೆ ದಾಖಲಿಸಿದೆ.

Facebook Comments

Sri Raghav

Admin