ಮೈಸೂರಿನಲ್ಲಿ ಐಎಸ್‍ಐ ಗುರುತಿನ ಹೆಲ್ಮೆಟ್‍ ಕಡ್ಡಾಯ, 31ರವರೆಗೆ ಗಡುವು

ಈ ಸುದ್ದಿಯನ್ನು ಶೇರ್ ಮಾಡಿ

Helmet
ಮೈಸೂರು, ಜ.9-ಐಎಸ್‍ಐ ಗುರುತಿನ ಹೆಲ್ಮೆಟ್‍ಗಳನ್ನು ಧರಿಸಲು ಕಡ್ಡಾಯಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಇದೇ 31 ರವರೆಗೆ ಗಡುವು ವಿಸ್ತರಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಅವರು ಮಾಹಿತಿ ನೀಡಿ ಗುಣಮಟ್ಟದ ಹೆಲ್ಮೆಟ್‍ಗಳು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಳೆದ ವರ್ಷ ನಡೆದಿರುವ 134 ಅಪಘಾತಗಳಲ್ಲಿ 44 ಮಂದಿ ಯುವಕರು ಸಾವನ್ನಪ್ಪಿದ್ದಾರೆ. ಈ ಯುವಕರ ಸಾವಿಗೆ ಮುಖ್ಯ ಕಾರಣ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿರುವುದೇ ಆಗಿದೆ. ಈ ಹಿನ್ನೆಲೆಯಲ್ಲಿ 2018ರ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಗುಣಮಟ್ಟದ ಐಎಸ್‍ಐ ಗುರುತಿನ ಹೆಲ್ಮೆಟ್‍ಗಳನ್ನು ಧರಿಸುವಂತೆ ಕಡ್ಡಾಯಗೊಳಿಸಲಾಗಿದೆಯೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin