ಸಿನಿಮಾ ಥಿಯೇಟರ್‍ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

National-Antheme

ನವದೆಹಲಿ, ಜ.9- ಸಿನಿಮಾ ಪ್ರದರ್ಶನಕ್ಕೂ ಮುನ್ನ ಥಿಯೇಟರ್‍ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದ್ದು , ಈ ಸಂಬಂಧ ಈ ಹಿಂದೆ ಉದ್ಭವಿಸಿದ್ದ ಗೊಂದಲಗಳಿಗೆ ಅಂತಿಮ ತೆರೆ ಎಳೆದಿದೆ. ಸಿನಿಮಾ ಹಾಲ್‍ಗಳಲ್ಲಿ ರಾಷ್ಟ್ರಗೀತೆ ಕುರಿತಂತೆ ಈ ಹಿಂದೆ ತಾನು ನೀಡಿದ ಆದೇಶದಲ್ಲಿ ಸುಪ್ರೀಂ ಕೋರ್ಟ್ ಕೆಲವು ಮಾರ್ಪಾಡು ಮಾಡಿದೆ.

ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಇದರೊಂದಿಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರದಿಂದ ರಚಿಸಲಾಗಿರುವ ಅಂತರ್ ಸಚಿವಾಲಯ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ರಾಷ್ಟ್ರಗೀತೆ ಗೌರವ ಅಧಿನಿಯಮಕ್ಕೆ ಅಪಮಾನವಾಗುವುದನ್ನು ತಡೆಗಟ್ಟಲು ಸಲಹೆ ಮಾಡುವುದಕ್ಕಾಗಿ ಸ್ಥಾಪನೆಗೊಳ್ಳುವ 12 ಸದಸ್ಯರ ಸಮಿತಿ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡಾವಿಟ್‍ನ್ನು ಸುಪ್ರಿಂ ಕೋರ್ಟ್ ಅಂಗೀಕರಿಸಿದೆ.

Facebook Comments

Sri Raghav

Admin