ಆಧಾರ್ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ 5 ಸಾವಿರ ಅಧಿಕಾರಿಗಳಿಗೆ ನಿರ್ಬಂಧ

ಈ ಸುದ್ದಿಯನ್ನು ಶೇರ್ ಮಾಡಿ

Adhaar--002
ನವದೆಹಲಿ,ಜ.10-ಆಧಾರ್ ಮಾಹಿತಿ ಸೋರಿಕೆಯಾಗಿದೆ ಎನ್ನುವ ಹಿನ್ನೆಲೆಯಲ್ಲಿ ಆಧಾರ್ ಪ್ರವೇಶಿಸುವ ಅವಕಾಶ ಹೊಂದಿದ್ದ ಸುಮಾರು 5 ಸಾವಿರ ಅಧಿಕಾರಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆಧಾರ್ ವೆಬ್‍ಸೈಟ್ ಪ್ರವೇಶಿಸಲು ನಿರ್ದಿಷ್ಟ ಅಧಿಕಾರಿಗಳಿಗೆ ನೀಡಿದ್ದ ಸೌಲಭ್ಯವನ್ನೂ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಪಾಪಸ್ ಪಡೆದಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಯೋಮೆಟ್ರಿಕ್ ವಿವರಗಳನ್ನು ಪರಾಮರ್ಶಿಸಲು ಅವಕಾಶವಿದೆಯೋ ಅಂಥ ಅಧಿಕಾರಿಗಳಿಗಷ್ಟೇ ಈಗ ಆಧಾರ್ ಪೋರ್ಟಲ್ ಬಳಸಲು ಅವಕಾಶ ಕಲ್ಪಿಸಲಾಗಿದೆ.

ಜ. 4ರಂದು ಪತ್ರಿಕೆಯೊಂದು ಆಧಾರ್ ಸೋರಿಕೆ ಬಗ್ಗೆ ವರದಿಯೊಂದು ಪ್ರಕಟಿಸಿತ್ತು. ಕೇವಲ 500 ರೂ.ಗಳಿಗೆ ಇಡೀ ದೇಶದ ಎಲ್ಲ ನಾಗರಿಕ ಆಧಾರ್ ಮಾಹಿತಿಯನ್ನು ಖರೀದಿ ಮಾಡಬಹುದು ಎಂಬ ಅಂಶ ಕುಟುಕು ಕಾರ್ಯಚಾರಣೆಯಲ್ಲಿ ಬಯಲಾಗಿತ್ತು.

Facebook Comments

Sri Raghav

Admin