ಏರ್ ಇಂಡಿಯಾದಲ್ಲಿ ಶೇ.49ರಷ್ಟು  ಎಫ್‍ಡಿಐ ಹೂಡಿಕೆಗೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

Air-India--01

ನವದೆಹಲಿ, ಜ.10- ಭಾರೀ ಸಾಲದಿಂದ ಜರ್ಜರಿತವಾಗಿರುವ ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಪುನಃಶ್ಚೇತನಗೊಳಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಶೇ.49ರಷ್ಟು ಪ್ರಮಾಣದವರಿಗೆ ವಿದೇಶಿ ನೇರ ಬಂಡವಾಳ (ಎಫ್‍ಡಿಐ) ಹೂಡಿಕೆಗೆ ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಅವಕಾಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.  ಮೂವತ್ತು ಸಾವಿರ ಕೋಟಿ ರೂ.ಗಳ ಸಾಲದಿಂದ ಅತಂತ್ರ ಸ್ಥಿತಿಯಲ್ಲಿದ್ದ ಏರ್ ಇಂಡಿಯಾವನ್ನು ಮಾರಾಟ ಮಾಡಲಾಗುತ್ತದೆ ಎಂಬ ವರದಿಗಳಿಗೆ ತೆರೆ ಎಳೆಯಲಾಗಿದ್ದು, ಅದರ ಪ್ರಮುಖ ಭಾಗದ ಒಡೆತನ ಭಾರತದಲ್ಲಿ ಉಳಿಯುವಂತಾಗಿದೆ.

Facebook Comments

Sri Raghav

Admin