ಚೀನಾಗೆ ಹಾರಿದ ಬಿಬಿಎಂಪಿ ಮೇಯರ್ ಸಂಪತ್‍ರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Sampat-Raj--01

ಬೆಂಗಳೂರು, ಜ.10- ಮೇಯರ್ ಸಂಪತ್ ರಾಜ್ ಮತ್ತು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮಹಮದ್ ರಿಜ್ವಾನ್ ಅವರು ಇಂದು ಚೀನಾ ಪ್ರವಾಸ ಕೈಗೊಂಡಿದ್ದಾರೆ.  ಇಂದು ಮಧ್ಯಾಹ್ನ 3 ಗಂಟೆಗೆ ವಿಮಾನ ಏರಿದ ಸಂಪತ್‍ರಾಜ್ ಹಾಗೂ ಮಹಮದ್ ರಿಜ್ವಾನ್ ಚೈನಾದಲ್ಲಿ ನಡೆಯಲಿರುವ ಇಂಟರ್ ನ್ಯಾಷನಲ್ ಟ್ರೇಡ್ ಎಕ್ಸ್  ಪೋದಲ್ಲಿ ಭಾಗವಹಿಸಲಿದ್ದಾರೆ. ಚೈನಾ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿಗೆ ತೆರಳುತ್ತಿರುವ ಮೇಯರ್ ಜ.15ರಂದು ನಗರಕ್ಕೆ ವಾಪಸ್ ಆಗಲಿದ್ದಾರೆ.  ನಿನ್ನೆ ತುರ್ತು ಕಾಮಗಾರಿ ಕೈಗೊಳ್ಳುವ ಸಂಬಂಧ ಪಾಲಿಕೆಯಲ್ಲಿ ವಿಷಯಾಧಾರಿತ ಸಭೆ ಕರೆಯಲಾಗಿತ್ತು. ಆದರೆ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ನಗರಕ್ಕೆ ಬಂದು ಚುನಾವಣಾ ಪೂರ್ವಭಾವಿ ಸಿದ್ಧತೆ ಕೈಗೊಂಡಿದ್ದರು. ಈ ಸಭೆಯಲ್ಲಿ ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಪಾಲ್ಗೊಳ್ಳಬೇಕಾಗಿತ್ತು. ಹಾಗಾಗಿ ಆಯುಕ್ತರು ಇಲ್ಲದ ಕಾರಣ ನಿನ್ನೆಯ ಸಭೆಯನ್ನು ಮುಂದೂಡಲಾಯಿತು. ಇದೀಗ ಮೇಯರ್ ಸಂಪತ್‍ರಾಜ್ ಚೈನಾಗೆ ಹೋಗಿ ವಾಪಸಾಗುವ ತನಕ ಅಂದರೆ ಸುಮಾರು ಒಂದು ವಾರಗಳ ತನಕ ಸಭೆ ನಡೆಯುವುದು ಅನುಮಾನ.

Facebook Comments

Sri Raghav

Admin