ಭಯೋತ್ಪಾದನೆ ನಿಗ್ರಹಕ್ಕೆ ಬದ್ಧತೆ ಪ್ರದರ್ಶಿಸುವಂತೆ ಪಾಕ್‍ಗೆ ಅಮೆರಿಕ ತಾಕೀತು

ಈ ಸುದ್ದಿಯನ್ನು ಶೇರ್ ಮಾಡಿ

Pakistan-Terrorism

ವಾಷಿಂಗ್ಟನ್, ಜ.10-ತನ್ನ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಸಂಘಟನೆಗಳನ್ನು ನಿಗ್ರಹಿಸುವ ಬದ್ಧತೆಯನ್ನು ಪ್ರದರ್ಶಿಸುವಂತೆ ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಮ್ಮೆ ತಾಕೀತು ಮಾಡಿದೆ. ತನಗೆ ದೊಡ್ಡ ಮಟ್ಟದ ಆರ್ಥಿಕ ನೆರವು ಕಡಿತಗೊಳಿಸಿದ ಅಮೆರಿಕಕ್ಕೆ ಸಡ್ಡು ಹೊಡೆಯಲು ಸೇನಾ ಮತ್ತು ಗುಪ್ತಚರ ಸಹಕಾರವನ್ನು ಪಾಕಿಸ್ತಾನ ರದ್ದುಗೊಳಿಸಿದ ವರದಿಗಳ ಹಿನ್ನೆಲೆಯಲ್ಲಿ ವಾಷಿಂಗ್ಟನ್, ಇಸ್ಲಾಮಾಬಾದ್‍ಗೆ ಪುನ: ಈ ಸಲಹೆ ಮಾಡಿದೆ.  ನೀವು ಮೊದಲು ಮಾತುಕತೆಗೆ ಬನ್ನಿ ಮತ್ತು ಉಗ್ರರ ನಿಗ್ರಹಕ್ಕೆ ಬದ್ಧತೆಯನ್ನು ಪ್ರದರ್ಶಿಸಿ ಎಂದು ವಿದೇಶಾಂಗ ಇಲಾಖೆ ಅಧೀನ ಕಾರ್ಯದರ್ಶಿ ಸ್ಟೀವ್ ಗೋಲ್ಡ್‍ಸ್ಟೀನ್ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಪಾಕಿಸ್ತಾನ ನಿರ್ಣಾಯಕ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ನಮಗಿದೆ. ಇಸ್ಲಾಮಾಬಾದ್ ಜೊತೆ ಭವಿಷ್ಯದ ಸಹಕಾರವನ್ನು ನಾನು ನಿರೀಕ್ಷಿಸುತ್ತೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

Facebook Comments

Sri Raghav

Admin