ಭಾವನಾತ್ಮಕ ಜೀವಿಗೆ ಭಾವಪೂರ್ಣ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

Shraddajali

ಬೆಂಗಳೂರು, ಜ.10- ಅಮೆರಿಕದಲ್ಲಿ ಅಕಾಲಿಕ ವಾಗಿ ನಿಧನರಾದ ಸ್ನೇಹ ಜೀವಿ ಡಾ.ಹಿರೇತೋಟ ಅವರಿಗೆ ಸ್ನೇಹ ಬಳಗದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹೆಬ್ಬಾಳದಲ್ಲಿರುವ ಪಶು ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರೇತೋಟ ಅವರ ನಿಕಟವರ್ತಿ ರಾಜಗೋಪಾಲ್ ಮಾತನಾಡಿ, ಅಮೆರಿಕಾದಂಥ ದೊರದ ದೇಶದಲ್ಲಿ ಪ್ರದೀಪ್ ರವರ ಕಷ್ಟಕಾಲದಲ್ಲಿ ಬಾಲ್ಯ ಗೆಳೆಯರಾದ ಮೇಗರವಳ್ಳಿ ಸುರೇಶ ಹಾಗು ಹೆಗ್ಗಾರು ಚಿದಾನಂದ್ ಎರಡು ತಿಂಗಳು ಅಲ್ಲೇ ಇದ್ದು ಅವರರಿಗೆ ಸಹಾಯ ಮಾಡಿದರು ಆದರೂ ಗೆಳೆಯ ಬದುಕಿ ಬರಲಿಲ್ಲ ಅಂತ್ಯ ಸಂಸ್ಕಾರ ಕೂಡ ಅಲ್ಲೇ ಮಾಡಿ ಭಾರತಕ್ಕೆ ಮರಳಿದ ಇವರು ಗೆಳೆತನಕ್ಕೆ ಆದರ್ಶವಾಗಿ ಮಾನವೀಯತೆ ಮೆರೆದಿದ್ದಾರೆ ಎಂದರು.

ಟಿ.ಡಿ.ರಾಜೇಗೌಡ ಮಾತನಾಡಿ, ಪ್ರದೀಪ್ ಒಬ್ಬ ಭಾವನಾತ್ಮಕ ಜೀವಿ ಅವರು ಅಮೆರಿಕಾಗೆ ಹೋಗಿ ಮೂವತ್ತು ವರ್ಷಗಳಾದರೂ ಭಾರತದ ಹಾಗು ಮಲೆನಾಡಿನ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದರು ಎಂದರು. ಇದೇ ಸಂದರ್ಭದಲ್ಲಿ ಮೇಗರವಳ್ಳಿ ಸುರೇಶರವರು ಗೆಳೆಯನ ಬಗ್ಗೆ ಮಾತನಾಡುತ್ತ ತುಂಬ ಭಾವುಕರಾದರು.
ಅಮೇರಿಕಾದಲ್ಲಿ ಅಲ್ಲಿಯ ಸ್ಥಳೀಯರನ್ನು ಕೂಡ ವಿಶ್ವಾಸಕ್ಕೆ ತೆಗೆದು ಕೊಂಡಿದ್ದದ್ದು ಅವರ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಅಲ್ಲಿ ನೆರೆದಿದ್ದ ಸ್ಥಳೀಯರೇ ಸಾಕ್ಷಿಯಾಗಿತ್ತು ಪ್ರದೀಪ್ ಗೆ ಅಲ್ಲಿಯ ಸೆನೆಟ್ ಸದ್ಯದಲ್ಲೇ ಅಭಿನಂದಿಸುವ ಸಂದರ್ಭ ಇತ್ತು ಎಂದು ಸ್ಥಳೀಯರು ಹೇಳುತ್ತಿದ್ದರು ಪ್ರದೀಪ್ ಫಿಶರೀ ಬಗ್ಗೆ ರಿಸರ್ಚ್ ಮಾಡುತಿದ್ದರು ಅದರಲ್ಲಿ ಉತ್ತಮ ಸಾಧನೆ ಮಾಡಿದ್ದರು ಎಂದರು.

ಇದೇ ವೇಳೆ ಗೆಳೆಯನ ಹೆಸರಲ್ಲಿ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ಒಂದು ಲಕ್ಷ ನಗದು ಉಳ್ಳ ಪ್ರದೀಪ ಪುರಸ್ಕಾರ ಪ್ರಶಸ್ತಿ ನೀಡಲು ಸುರೇಶರವರು 5 ಲಕ್ಷ ರೂ ಗಳ ಚೆಕ್ ನ್ನು ತೆನೆ ಟ್ರಸ್ಟಿಗೆ ಹಸ್ತಾಂತರಿಸಿದರು. ಚೆಕ್ ಸ್ವೀಕರಿಸಿದ ತೆನೆ ಮುಖ್ಯಸ್ಥ ಸುಧೀರ್ ಕುಮಾರ್ ಮುರೊಳ್ಳಿ ಇದೊಂದು ಭಾವನಾತ್ಮಕ ಕಾರ್ಯಕ್ರಮ,ಆರದೆ ಉಳಿಯಲಿ ಮಾನವನೆದೆಯಲಿ ದೇವರು ಹಚ್ಚಿದ ದೀಪ ಎಂಬಂತೆ ಪ್ರದೀಪ್ ರವರು ನಮ್ಮೆಲ್ಲರ ಎದೆಯಲಿ ಉಳಿದಿದ್ದರೆ ನಮಗೆ ವಹಿಸಿರುವ ಪ್ರದೀಪ ಪುರಸ್ಕಾರ ಪ್ರಶಸ್ತಿ ಹೊಣೆಯನ್ನು ಚೆನ್ನಾಗಿ ನೆಡೆಸಿ ಕೊಡುತ್ತೇವೆ ಎಂದರು ಕಾರ್ಯಕ್ರಮದಲ್ಲಿ ಚಿದಾನಂದ್ , ಜಯಪ್ರಕಾಶ್ ಹಾಗೂ ಅವರ ಕುಟುಂಬ ವರ್ಗದವರು ಹಾಜರಿದ್ದರು.

Facebook Comments

Sri Raghav

Admin