ಯುಎಇಯಲ್ಲಿ ಭಾರತೀಯನಿಗೆ ಹೊಡೀತು ಬರೋಬ್ಬರಿ 21 ಕೋಟಿ ಜಾಕ್‍ಪಾಟ್..!

ಈ ಸುದ್ದಿಯನ್ನು ಶೇರ್ ಮಾಡಿ

UAE

ಯುಎಇ, ಜ.10- ಅದೃಷ್ಟ ಬಂದರೆ ಎಲ್ಲಿದ್ದರೂ ಹುಡುಕಿ ಕೊಂಡು ಬರುತ್ತದೆ ಎಂದು ಹೇಳುವುದು ಇದಕ್ಕೆ ಇರಬೇಕು..! ಇದಕ್ಕೆ ಸಾಕ್ಷಿ ಯೆಂಬಂತೆ ಭಾರತೀಯ ಪ್ರಜೆಯೊಬ್ಬರಿಗೆ ಯುಎಇ ಲಾಟರಿಯಲ್ಲಿ 21 ಕೋಟಿ ಜಾಕ್‍ಪಾಟ್ ಹೊಡೆದಿದೆ.  ಕೇರಳದ ಹರಿಕೃಷ್ಣನ್ ಎಂಬ ಆ ಬಂಪರ್ ಬಹುಮಾನ ಗೆದ್ದ ಭಾರತೀಯ. ಈತ ಅಬುದಬಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊಂಡುಕೊಂಡ ಲಾಟರಿ ಟಿಕೆಟ್‍ಗೆ 21 ಕೋಟಿ ರೂ. ಬಹುಮಾನ ಬಂದಿದೆ.  ಈತ ಕಳೆದ ಎರಡು ಬಾರಿಯು ಯುಎಇ ಲಾಟರಿ ಟಿಕೆಟ್ ಅನ್ನು ಗಳಿಸಿದ್ದರೂ ಯಾವುದೇ ಬಹುಮಾನ ಬಂದಿರಲಿಲ್ಲ. ಆದರೆ ಆತ ಮೂರನೇ ಬಾರಿ ಕೊಂಡು ಕೊಂಡ ಲಾಟರಿ ಟಿಕೆಟ್ ಆತನ ಅದೃಷ್ಟವನ್ನೇ ಖುಲಾಯಿ ಸಿದೆ.

ಈ ಬಾರಿಯು ಆತನಿಗೆ ಜಾಕ್‍ಪಾಟ್ ಹೊಡೆದಿ ರುವ ವಿಷಯ ತಿಳಿದ ತಕ್ಷಣ ನಂಬಲಿರಲಿಲ್ಲ. ಆದರೆ ಪದೇ ಪದೇ ರೇಡಿಯೋದಲ್ಲಿ ಆತನ ಹೆಸರು ಪ್ರಕಟಿಸುತ್ತಿದ್ದಾಗ ತನ್ನ ಪತ್ನಿಗೆ ವಿಷಯ ತಿಳಿಸಿದ್ದಾನೆ. ನಂತರ ವೆಬ್‍ಸೈಟ್ ಅನ್ನು ಪರಿಶೀಲಿಸಿದಾಗ ಆತನಿಗೆ 12 ಮಿಲಿಯನ್ ದಿರ್ಹಾಮ್ (ಅಬುದಾಬಿ ಕರೆನ್ಸಿ) ಜಾಕ್‍ಪಾಟ್ ಬಂದಿರುವುದು ತಿಳಿದು ಸಂತಸಗೊಂಡಿದ್ದಾರೆ.  ಫೆಬ್ರವರಿ 5 ರಂದು ಹರಿಕೃಷ್ಣನ್ ಆ 21 ಕೋಟಿಯ ಜಾಕ್‍ಪಾಟ್ ಹಣವನ್ನು ಪಡೆಯಲಿದ್ದು ಆತನ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

Facebook Comments

Sri Raghav

Admin