ಷೇರುಪೇಟೆ ಮತ್ತೆ ಸಾರ್ವಕಾಲಿಕ ದಾಖಲೆ

Sensex

ಮುಂಬೈ, ಜ.10-ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್‍ಇ) ಇಂದು ವಹಿವಾಟಿನಲ್ಲಿ ಮತ್ತೆ ಸಾರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿದೆ. ಇದರಿಂದ ಸತತ ಮೂರನೇ ದಿನವೂ ಸೂಚ್ಯಂಕ ಏರುಮುಖ ಚಲನೆ ಮುಂದುವರಿದಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಬಿಎಸ್‍ಇ 34,565.63ರ ಸಾರ್ವಕಾಲಿಕ ಮಟ್ಟ ತಲುಪಿದ್ದು, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ(ಎನ್‍ಎಸ್‍ಇ) ನಿಫ್ಟಿ ಮೊದಲ ಬಾರಿಗೆ 10,659.15 ಅಂಶಗಳಿಗೆ ಏರಿಕೆಯಾಗಿದೆ.
ದೇಶಿ ಮತ್ತು ವಿದೇಶಿ ಹೂಡಿಕೆ ಹೆಚ್ಚಾಗಿರುವುದು, ಸೇವಾ ವಲಯ ಪ್ರಗತಿಯು ಸಕರಾತ್ಮಕ ವಹಿವಾಟು ಸಾಗುವಂತೆ ಮಾಡಿವೆ. ಔಷಧಿ, ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಷೇರುಗಳ ಉತ್ತಮ ಖರೀದಿ ವಹಿವಾಟಿಯಿಂದ ಈ ಹೊಸ ಏರಿಕೆ ಕಂಡುಬಂದಿವೆ.

Facebook Comments

Sri Raghav

Admin