ಸಂಸದ ಸುರೇಶ್ ಅಂಗಡಿಗೆ ಮೈಚಳಿ ಬಿಡಿಸಿದ ಅಮಿತ್ ಶಾ

ಈ ಸುದ್ದಿಯನ್ನು ಶೇರ್ ಮಾಡಿ

Suresh-Angadi-------01

ಬೆಂಗಳೂರು,ಜ.10- ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಸುರೇಶ್ ಅಂಗಡಿ ಮೈಚಳಿ ಬಿಡಿಸಿದ ಘಟನೆ ನಡೆದಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಅಮಿತ್ ಶಾ ಮಂಗಳವಾರ ಹಾಗೂ ಬುಧವಾರ ಬೆಳಗ್ಗೆ ಬೆಂಗಳೂರಿನ ರೆಸಾರ್ಟ್‍ನಲ್ಲಿ ಸರಣಿ ಸಭೆ ನಡೆಸಿದರು. ಈ ವೇಳೆ ಸಂಸದ ಅಂಗಡಿ ಮಾತನಾಡಿ, ಸಂಸದರಿಗೆ ಸ್ಥಳೀಯ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಡಬೇಕು. ದೂರದ ಕ್ಷೇತ್ರಕ್ಕೆ ತೆರಳಲು ಕಷ್ಟವಾಗುತ್ತದೆ ಎಂದು ಶಾಗೆ ಮನವಿ ಮಾಡಿದರು.

ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಶಾ ನಿಮಗೆ ಕಷ್ಟವಾದರೆ ಮನೆಯಲ್ಲಿ ವಿಶ್ರಾಂತಿ ಪಡೆಯಿರಿ ಎಂದು ಹೇಳಿದರು. ಇದಕ್ಕೆ ಸಭೆಯಲ್ಲಿದ್ದ ಸದಸ್ಯರು ಬೆಂಬಲಿಸಿದರು. ಆಗ ಮಾತು ಮುಂದುವರಿಸಿದ ಶಾ, ನಿಮಗೆ ಕಷ್ಟವಾದರೆ ಎಷ್ಟು ಜನ ನಿಮ್ಮ ಕೆಲಸ ಮಾಡಲು ಸಿದ್ಧರಿದ್ದಾರೆ ನೋಡಿ ಎಂದರು. ಈ ಮೂಲಕ ನಮ್ಮ ಮಾತು ಕೇಳದಿದ್ದರೆ ನಿಮ್ಮನ್ನು ಮನೆಗೆ ಕಳುಹಿಸಲಾಗುವುದು ಎಂದು ಅಂಗಡಿಗೆ ಶಾ ಪರೋಕ್ಷ ಎಚ್ಚರಿಕೆ ನೀಡಿದರು.  ಲಿಂಗಾಯತ ಸಮುದಾಯಕ್ಕೆ ಸೇರಿರುವ ಸುರೇಶ್ ಅಂಗಡಿ ಬೆಳಗಾವಿ ಕ್ಷೇತ್ರದಿಂದ ಹಲವು ಬಾರಿ ಸಂಸದರಾಗಿ ಚುನಾಯಿತರಾಗಿದ್ದರು. ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ ಅವರಿಗೆ ಸಚಿವ ಸ್ಥಾನ ಲಭಿಸದ ಕಾರಣ ಅಸಮಾಧಾನಗೊಂಡಿದ್ದರು.

Facebook Comments

Sri Raghav

Admin