ಸಿಲಿಕಾನ್ ಸಿಟಿಯಲ್ಲಿ ಜ.20ರಿಂದ ಕರಾವಳಿ ಉತ್ಸವ, ಎಲ್ಲಿ ನಡೆಯುತ್ತೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Karavali-Utsava--01
ಬೆಂಗಳೂರು,ಜ.10-ರಾಜ್ಯದ ವಿವಿಧ ಭಾಗದ ಸಂಸ್ಕøತಿ, ಜೀವನ ಶೈಲಿಯ ಶ್ರೀಮಂತಿಕೆ ಹಾಗೂ ಕರಾವಳಿ ಭಾಗದ ಖಾದ್ಯಗಳ ವೈವಿದ್ಯತೆಯನ್ನು ಬೆಂಗಳೂರಿಗೆ ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.   ನಗರದ ಪ್ರೆಸ್‍ಕ್ಲಬ್‍ನಲ್ಲಿಂದು ಜ.20 ಮತ್ತು 21ರಂದು ಜಯನಗರದ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ ಅಭಿನಂದನಾ ಟ್ರಸ್ಟ್ ವತಿಯಿಂದ ನಡೆಯುವ ನಮ್ಮೂರಹಬ್ಬ ಎಂಬ ಕರಾವಳಿ ಉತ್ಸವದ ಪೋಸ್ಟರ್‍ನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಹುಸಂಸ್ಕøತಿಯ ತವರು ಮನೆಯಾಗಿರುವ ಬೆಂಗಳೂರು, ಮೂಲಗಳ ಬೇಧವಿಲ್ಲದೆ ಎಲ್ಲಾ ಸಂಸ್ಕøತಿ, ಭಾಷೆ, ಆಹಾರ ಜೀವನ ಕ್ರಮಕ್ಕೆ ಸೂರು ಕೊಟ್ಟಿದೆ. ಇಂದು ನಗರದಲ್ಲಿ ಸರಿಸುಮಾರು 15 ಲಕ್ಷಕ್ಕೂ ಹೆಚ್ಚು ಕರಾವಳಿಯ ಜನರಿದ್ದು , ಕರಾವಳಿಯು ತಾಯಿ ಬೇರಿನ ಜೊತೆಗಿನ ಅನುಭವವನ್ನು ಕಳೆದುಕೊಳ್ಳದೆ ಕಾಪಾಡಿಕೊಂಡು ಬಂದಿದ್ದಾರೆ. ಇವರೆಲ್ಲರನ್ನು ಒಂದೇ ಸೂರಿನಡಿ ನೋಡುವ ಅಪರೂಪದ ಉತ್ಸವವಾಗಿದೆ ಎಂದರು. ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಯನ್ನು ಮೆಲುಕು ಹಾಕುವ ಸಂಸ್ಕøತಿ ವಿನಿಮಯ ಸದುದ್ದೇಶ ವನ್ನು ನಮ್ಮೂರ ಹಬ್ಬ ಹೊಂದಿದೆ ಎಂದರು.

ಹಬ್ಬದಲ್ಲಿ ಪ್ರಮುಖ ವಿಶೇಷತೆ ಏನೆಂದರೆ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ನೇತೃತ್ವದಲ್ಲಿ ಕಾರ್ಟೂನ್ ಚಿತ್ರ ಪ್ರದರ್ಶನ ಕಾರ್ಯಕ್ರಮದ ವಿಶೇಷವಾಗಲಿದೆ.
ಚಪ್ಪರದ ವೇದಿಕೆಯಲ್ಲಿ ಕರಾವಳಿಯವರು ವಿವಿಧ ಕಲೆಗಳ ಪ್ರದರ್ಶನ ಮತ್ತು ಕರಾವಳಿಯ ಶ್ರೀಮಂತಿಕೆ ಅನಾವರಣಗೊಳ್ಳಲಿದೆ ಎಂದರು. ಚಿತ್ರಸಂತೆ ಆಟದ ಬಯಲಿನಲ್ಲಿ ವಯಸ್ಕರಿಗೆ ಹಗ್ಗ-ಜಗ್ಗಾಟ ದಂಪತಿಗೆ ಪ್ರತ್ಯೇಕ ಕ್ರೀಡೆಗಳು ಹಾಗೂ ಮಕ್ಕಳಿಗೆ ಚಿತ್ರಕಲೆ, ಪುಟ್ಟ ಮಕ್ಕಳಿಗೆ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಹಬ್ಬದಲ್ಲಿ ಅತ್ಯಂತ ಆಕರ್ಷಣೀದ ಕರಾವಳಿಯ ವಿಶೇಷ ಖಾದ್ಯಗಳನ್ನು ಸವಿಯಬಹುದಾಗಿದೆ ಎಂದರು.   ಈ ವರ್ಷದ ಟ್ರಸ್ಟ್‍ನ ಪ್ರತಿಷ್ಟಿತ ಪ್ರಶಸ್ತಿಯನ್ನು ಚಿತ್ರನಟ ಉಪೇಂದ್ರ ಮತ್ತು ಮಣಿಪಾಲ್ ನಿವೃತ್ತ ಉಪಕುಲಪತಿಗಳಾದ ಬಿ.ಎಂ.ಹೆಗಡೆ ಅವರಿಗೆ ನೀಡಿ ಗೌರವಿಸಲಾಗುವುದು ಎಂದರು. ಈ ವೇಳೆ ಕೇಂದ್ರ ಸಚಿವರಾದ ಅನಂತಕುಮಾರ್ , ಸದಾನಂದಗೌಡ, ಖ್ಯಾತ ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.  ಶನಿವಾರ ಬೆಳಗ್ಗೆ 10.30ಕ್ಕೆ ಖ್ಯಾತ ಭಾಗವತರಾದ ಶ್ರೀ ಸುಬ್ರಮಣ್ಯ ತಾರೇಶ್ವರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಸುಕ್ರಿ ಬೊಮ್ಮಗೌಡ, ಗೃಹ ಸಚಿವ ರಾಮಲಿಂಗಾರೆಡ್ಡಿ , ಶಾಸಕ ಬಿ.ಎನ್.ವಿಜಯಕುಮಾರ್ ಮುಂತಾದವರು ಆಗಮಿಸಲಿದ್ದಾರೆ.

Facebook Comments

Sri Raghav

Admin