ಸೇನಾ ಸಹಕಾರ ರದ್ದುಗೊಳಿಸಿ ಅಮೆರಿಕಾಗೆ ಸೆಡ್ಡು ಹೊಡೆದ ಪಾಕ್

ಈ ಸುದ್ದಿಯನ್ನು ಶೇರ್ ಮಾಡಿ

Pakistan-America

ಇಸ್ಲಾಮಾಬಾದ್, ಜ.10-ಉಗ್ರಗಾಮಿ ಸಂಘಟನೆಗಳು ಮತ್ತು ಭಯೋತ್ಪಾದಕರ ನಿಗ್ರಹಕ್ಕಾಗಿ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳದ ವಿಷಯದಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ನಡುವೆ ತಲೆದೋರಿರುವ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಂಡಿದೆ. ಆರ್ಥಿಕ ನೆರವು ನಿಲ್ಲಿಸಿ ಪಾಕಿಸ್ತಾನಕ್ಕೆ ಅಮೆರಿಕ ದೊಡ್ಡ ಮಟ್ಟದ ಹೊಡೆತ ನೀಡಿರುವ ಬೆನ್ನಲ್ಲೇ ಇಸ್ಲಾಮಾಬಾದ್ ವಾಷಿಂಗ್ಟನ್ ವಿರುದ್ಧ ತಿರುಗಿಬಿದ್ದಿದೆ. ಅಮೆರಿಕ ಜೊತೆ ಸೇನಾ ಮತ್ತು ಗುಪ್ತಚರ ಸಹಕಾರವನ್ನು ಪಾಕಿಸ್ತಾನ ರದ್ದುಗೊಳಿಸಿದ್ದು, ಎರಡೂ ದೇಶಗಳ ನಡುವಣ ಬಾಂಧವ್ಯ ಮತ್ತಷ್ಟು ಹಳಸಿದೆ.

ಅಮೆರಿಕ ಜೊತೆ ಮಿಲಿಟರಿ ಮತ್ತು ಇಂಟೆಲಿಜೆನ್ಸ್ ಸಹಕಾರವನ್ನು ರದ್ದುಗೊಳಿಸಲಾಗಿದೆ ಎಂದು ರಕ್ಷಣಾ ಸಚಿವ ಖುರ್ರಂ ದಸ್ತಗಿರ್ ಖಾನ್ ಖಚಿತಪಡಿಸಿರುವುದಾಗಿ ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.  ಇಸ್ಲಾಮಾಬಾದ್‍ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಉಗ್ರ ಬಣಗಳು ಮತ್ತು ಭಯೋತ್ಪಾದಕರನ್ನು ನಿಗ್ರಹಿಸಲು ಪಾಕಿಸ್ತಾನ ಸಾಕಷ್ಟು ತ್ಯಾಗ ಮಾಡಿದೆ. ಆದರೆ ಇದಕ್ಕಾಗಿ ನಾವು ಯಾರ ಬಳಿಯೂ ಬೆಲೆ ತೆರುವಂತೆ ಕೇಳಿಲ್ಲ. ನಮ್ಮ ತಾಗ್ಯವನ್ನು ಅಮೆರಿಕ ಗುರುತಿಸಬೇಕು. ನಾವು ಆ ದೇಶದೊಂದಿಗಿನ ಸೇನಾ, ಬೇಹುಗಾರಿಕೆ ಮತ್ತು ಗುಪ್ತಚರ ಸಂಬಂಧ ಸಹಕಾರವನ್ನು ಕಡಿತಗೊಳಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin