ಹುಬ್ಬಳ್ಳಿ ಕಿಮ್ಸ್ ನಲ್ಲಿ ಮತ್ತೊಂದು ಯಡವಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

Kims

ಹುಬ್ಬಳ್ಳಿ, ಜ.10- ಕಳೆದ ಎರಡು ದಿನಗಳ ಹಿಂದೆ ಜೀವವಿದ್ದ ಯುವಕನನ್ನು ಶವಾಗಾರಕ್ಕೆ ಹಾಕಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೆ ಕಿಮ್ಸ್‍ನಲ್ಲಿ ಮತ್ತೊಂದು ಯಡವಟ್ಟು ನಡೆದಿದೆ.  ಕಿಮ್ಸ್‍ನ ಮಕ್ಕಳ ವಾರ್ಡ್‍ನಲ್ಲಿ ಅವಧಿ ಮೀರಿದ ಔಷಧಿ ಸಂಗ್ರಹ ಪತ್ತೆಯಾಗಿದ್ದು, ಪೋಷಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಬೆಳಗ್ಗೆ ಪೋಷಕರೊಬ್ಬರಿಗೆ ನೀಡಿದ ಔಷಧಿ ಅವಧಿ ಮೀರಿರುವುದು ಗೊತ್ತಾಗಿ ತಕ್ಷಣ ಆಸ್ಪತ್ರೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.  ಈ ವೇಳೆ ಸಿಬ್ಬಂದಿ ಮಕ್ಕಳ ವಾರ್ಡ್‍ನಲ್ಲಿ ಅವಧಿ ಮೀರಿದ ಔಷಧಿ ಸಂಗ್ರಹಿಸಿಟ್ಟಿದುದು ಬೆಳಕಿಗೆ ಬಂದಿದೆ. ಈಗಾಗಲೇ ಕೆಲವರಿಗೆ ಔಷಧಿ ವಿತರಣೆಯಾಗಿದ್ದು , ಇದು ಅವಧಿ ಮೀರಿರುವ ಔಷಧಿ ಇರಬಹುದು ಎಂದು ಪೋಷಕರು ಶಂಕಿಸಿ ಆತಂಕಕ್ಕೆ ಒಳಗಾಗಿದ್ದಾರೆ.  ತಕ್ಷಣ ಅವಧಿ ಮೀರಿರುವ ಔಷಧಿಯನ್ನು ನಾಶಪಡಿಸ ಬೇಕೆಂದು ಹಿರಿಯ ಅಧಿಕಾರಿಗಳನ್ನು ಪೋಷಕರು ಒತ್ತಾಯಿಸಿದ್ದಾರೆ.

Facebook Comments

Sri Raghav

Admin