1 ಕೋಟಿ ಮೊತ್ತದ ಸಿಗರೇಟ್ ಕದ್ದಿದ್ದ ಕಳ್ಳ ಕೊನೆಗೂ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Smoking--03

ತುಮಕೂರು, ಜ.10- ನಗರದ ಹೃದಯಭಾಗದಲ್ಲಿರುವ ಧೋಂತಿ ಸಿಗರೇಟ್ ಏಜೆನ್ಸಿಯಲ್ಲಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತಂಡದ ಪೊಲೀಸರು ವ್ಯಕ್ತಿಯೊಬ್ಬ ನನ್ನು ಬಂಧಿಸಿ ಸುಮಾರು 64,56, 675 ರೂ. ಮೌಲ್ಯದ 57 ಬಾಕ್ಸ್‍ಗಳ ಸಿಗರೇಟ್ ಹಾಗೂ 27 ಲಕ್ಷ ನಗದನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ.  ರಾಜಸ್ಥಾನದ ಮೂಲದ ದಯಾನಂದ ಸರ್ವೆ ಬಂಧಿತ ವ್ಯಕ್ತಿ. ನಗರದ ಖಾಸಗಿ ಬಸ್ ನಿಲ್ದಾಣ ಸಮೀಪವಿರುವ ಧೋಂತಿ ಐಟಿಸಿ ಸಿಗರೇಟ್ ಏಜೆನ್ಸಿಯಲ್ಲಿ ಕಳೆದ ಡಿಸೆಂಬರ್ 13 ರಂದು ದರೋಡೆಕೋರರ ಗುಂಪೊಂದು ರೋಲಿಂಗ್ ಶಟರ್ ಮೀಟಿ ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಮೌಲ್ಯದ ಸಿಗರೇಟ್ ಬಾಕ್ಸ್‍ಗಳನ್ನು ಕದ್ದೊಯ್ದಿತ್ತು.

ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ಪರಿಗಣಿಸಿದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್, ಎಎಸ್‍ಪಿ ಶೋಭಾರಾಣಿ, ಡಿವೈಎಸ್ಪಿ ನಾಗರಾಜ್ ಮಾರ್ಗದರ್ಶನದಲ್ಲಿ ಡಿಸಿಪಿ ವಿಭಾಗದ ಇನ್ಸ್‍ಪೆಕ್ಟರ್ ರಾಘವೇಂದ್ರ, ಮಲ್ಲೇಶ್, ಸೈಮನ್, ಮಂಜುನಾಥ್, ಚಂದ್ರಶೇಖರ್,ವಿಜಯ್‍ಕುಮಾರ್, ಕಾಂತರಾಜು ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಸಿಸಿಟಿವಿ ಫುಟೇಜ್ ಹಾಗೂ ಮೊಬೈಲ್ ಟವರ್ ಆಧಾರದ ಮೇಲೆ ಈ ವಿಶೇಷ ತಂಡ ತಮಿಳುನಾಡಿನ ಪೆರಂಬದೂರು, ರಾಜಸ್ಥಾನ, ಬೆಂಗಳೂರಿ ನಲ್ಲಿ ಕಾರ್ಯಾ ಚರಣೆ ನಡೆಸಿ ನಿಖರ ಮಾಹಿತಿ ಮೇರೆಗೆ ದಯಾನಂದ ಸರ್ವೆಯನ್ನು ತಮಿಳುನಾಡಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬಂಧಿತನಿಂದ 57 ಬಾಕ್ಸ್ ಸಿಗರೇಟ್ ಹಾಗೂ 27 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಈತನನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸಿದಾಗ ಈತನ ಹಿಂದೆ ದೊಡ್ಡ ಜಾಲವೇ ಇರುವುದು ಪತ್ತೆಯಾಗಿದೆ. ದಯಾನಂದ ರಾಜಸ್ಥಾನ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ವಾಸವಿದ್ದು, ಸಿಗರೇಟ್ ಗೋದಾಮುಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಈ ವಿಶೇಷ ತಂಡದ ಕಾರ್ಯವೈಖರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

Facebook Comments

Sri Raghav

Admin