ಈತ ಪ್ರೀತಿಯ ಹೆಸರಲ್ಲಿ ಮಗಳನ್ನೇ ಮದುವೆಯಾಗಲು ಮುಂದಾದ..!

ಈ ಸುದ್ದಿಯನ್ನು ಶೇರ್ ಮಾಡಿ

Marriage-Breakup
ಬಾಗಲಕೋಟೆ, ಜ.11- ಭಾರತೀಯ ಸಮಾಜದಲ್ಲಿ ಸಂಬಂಧಗಳಿಗೆ ಒಂದು ಅಮೂಲ್ಯವಾದ ಬೆಲೆ ಇದೆ. ಆದರೆ, ಆಧುನಿಕತೆಗೆ ಮಾರು ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಈ ಸಂಬಂಧಗಳಿಗೆ ಯಾವುದೇ ಬೆಲೆ ಇಲ್ಲವೋ ಏನೋ ಎಂಬ ಭಾವನೆ ವ್ಯಕ್ತವಾಗುತ್ತಿದೆ. ಏಕೆಂದರೆ, ಈ ಸಂಬಂಧವನ್ನು ಯಾರೂ ಕೂಡ ಒಪ್ಪಲಾರರು. ಅಂತಹ ಒಂದು ಸಂಬಂಧ ಇಲ್ಲಿ ಏರ್ಪಟ್ಟಿದೆ. ಓರ್ವ ಯುವಕ ಪ್ರೀತಿಯ ಹೆಸರಲ್ಲಿ ಮಗಳನ್ನೇ ವರಿಸೋಕೆ ಮುಂದಾಗಿದ್ದಾನೆ. ಬಾಗಲಕೋಟೆಯ ನವನಗರದ ನಿವಾಸಿಯಾಗಿರುವ ಸಾಗರ್ ಸುಗತೇಕರ್ ಎಂಬಾತ ಅದೇ ಕಾಲೋನಿಯ ಪೂನಂ ಸುಗತೇಕರ್ ಎಂಬ ಯುವತಿ ಜತೆಗೆ ಲವ್ವಿ-ಡವ್ವಿ ಶುರುವಾಗಿತ್ತು.

ಕಳೆದ ಒಂದು ವರ್ಷದ ಹಿಂದೆ ಯಾರಿಗೂ ಗೊತ್ತಿಲ್ಲದೆ ಈ ಇಬ್ಬರ ನಡುವೆ ಅನೈತಿಕ ಸಂಬಂಧವೂ ಬೆಳೆದಿತ್ತು. ಇದಲ್ಲದೆ ಕಳೆದ ಒಂದು ವಾರದ ಹಿಂದೆ ಈ ಇಬ್ಬರು ಮನೆ ಬಿಟ್ಟು ಹೋಗಿದ್ದರು. ಮದುವೆ ಕೂಡ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಸಂಬಂಧದಲ್ಲಿ ಚಿಕ್ಕಪ್ಪ-ಮಗಳ ಸಂಬಂಧವಿದ್ದು, ಹುಡುಗಿಯ ಪೋಷಕರು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಅಲ್ಲದೆ, ಸಮಾಜದ ಮುಖಂಡರ ಸಮಕ್ಷಮ ಪೊಲೀಸರ ನೆರವಿನಿಂದ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ, ಈಗ ಸಾಗರ್ ಈ ಸಂಬಂಧ ನನಗೇನು ಗೊತ್ತಿಲ್ಲ. ನನಗೆ ಅವಳೇ ಬೇಕು ಎಂದು ಹಠ ಹಿಡಿದು ಕುಳಿತಿದ್ದಾನೆ. ಹುಡುಗಿಯನ್ನು ಕರೆತರದಿದ್ದರೆ ಪೊಲೀಸ್ ಠಾಣೆ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪ್ರತಿಭಟನೆ ಮಾಡುತ್ತಿದ್ದಾನೆ. ಏನಾಯ್ತು, ಎತ್ತ ಹೋಯ್ತು ಸಂಬಂಧದ ಪರಿ. ಯಾರು ತಿಳಿ ಹೇಳುವವರಿಲ್ಲವೇ..?

Facebook Comments

Sri Raghav

Admin