ತುಮಕೂರಲ್ಲಿ ಅಂತರ್‌ಧರ್ಮೀಯ ಲವ್ ಸ್ಟೋರಿಗೆ ‘ಜಿಹಾದಿ’ ಟ್ವಿಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Love-Story--01

ತುಮಕೂರು, ಜ.11- ಪ್ರೀತಿ-ಪ್ರೇಮದ ಗುಂಗೇ ಹೀಗೆ. ಹುಡುಗಿ ಸಾಫ್ಟ್‍ವೇರ್ ಎಂಜಿನಿಯರ್. ಆತ ಆಟೋ ಚಾಲಕ. ಅನ್ಯ ಕೋಮಿನವರಾದ ಇಬ್ಬರ ನಡುವೆ ಪಯಣದಲ್ಲೇ ಪ್ರೇಮಾಂಕುರವಾಗಿ ಅದು ಮದುವೆಯ ಹಂತ ತಲುಪಿ ಈಗ ಲವ್ ಜಿಹಾದ್ ಬಣ್ಣ ಕಟ್ಟಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.   ಚಿತ್ರವೆಂದರೆ ಕಳೆದ ನವೆಂಬರ್‍ನಲ್ಲಿ ಈ ಹುಡುಗಿಗೆ ನಿಶ್ಚಿತಾರ್ಥವೂ ಕೂಡ ಆಗಿತ್ತು. ಆದರೆ ಡಿ.24ರಂದು ಈಕೆ ಸುಳ್ಳು ವಿಳಾಸ ಹೇಳಿ ತನ್ನ ಪ್ರಿಯಕರನೊಂದಿಗೆ ತೆರಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದಾರೆ. ಅದು ನೋಂದಣಿ ಕೂಡ ಆಗಿದೆ. ಇದನ್ನು ತಿಳಿದು ಈಗ ಹುಡುಗಿಯ ಪೋಷಕರು ಪೊಲೀಸರ ಬಳಿ ಅಂಗಲಾಚಿ ನನ್ನ ಮಗಳನ್ನು ಉಳಿಸಿಕೊಂಡಿ ಎಂದು ಗೋಗರೆಯುತ್ತಿದ್ದಾರೆ.  ಆದರೆ ಇಬ್ಬರು ವಯಸ್ಕರಾಗಿರುವುದರಿಂದ ವಿವಾಹ ಕಾನೂನು ಬದ್ಧವಾಗಿದೆ. ಆದರೆ ಕೆಲವರು ಲವ್ ಜಿಹಾದ್ ಎಂದು ದೂರುತ್ತಿದ್ದಾರೆ. ಆದರೆ ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ.

ಘಟನೆಯ ವಿವರ:

ತುಮಕೂರು ತಾಲ್ಲೂಕಿನ ಕುಂಕುಮನಹಳ್ಳಿಯ ಅಬ್ದುಲ್ ಖಾದರ್ ಅವರ ಪುತ್ರ ಸಯ್ಯದ್ ಪಾಷ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ.  ಇದೇ ಊರಿನಲ್ಲಿ ವಾಸವಾಗಿರುವ ಜ್ವಾಲಕುಮಾರ್ ಅವರ ಪುತ್ರಿ ಚೈತ್ರ ಬಿಇ ವ್ಯಾಸಂಗ ಮುಗಿಸಿ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಎರಡು ಕುಟುಂಬ ಅಕ್ಕಪಕ್ಕದಲ್ಲೇ ವಾಸವಾಗಿದ್ದರಿಂದ ಚಿರಪರಿಚಿತರಾಗಿದ್ದರು.

ಆದರೆ ಪ್ರತಿ ದಿನ ಚೈತ್ರಾಳನ್ನು ಆಟೋದಲ್ಲಿ ಸಯ್ಯದ್ ಪಾಷ ಬಸ್ ನಿಲ್ದಾಣದವರೆಗೂ ಕರೆದುಕೊಂಡು ಹೋಗಿ ಬಿಡುತ್ತಿದ್ದ. ಆದರೆ ಯಾರಿಗೂ ಇವರ ನಡುವೆ ಇದ್ದಂತಹ ಪ್ರೀತಿ ಗೊತ್ತಿರಲಿಲ್ಲ. ಕಳೆದ ನವೆಂಬರ್‍ನಲ್ಲಿ ಇದ್ದಕ್ಕಿದ್ದಂತೆ ಕಾಣೆಯಾದಾಗ ಪೋಷಕರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಇವರಿಬ್ಬರ ಬಗ್ಗೆ ಕೆಲ ಮಾಹಿತಿಗಳು ಸಿಕ್ಕಿತ್ತು. ಆದರೆ ಚೈತ್ರಾ ಪೋಷಕರು ಇತ್ತೀಚೆಗೆ ಈಕೆ ಅಬ್ದುಲ್ ಪಾಷಾ ಜತೆಗೆ

Facebook Comments

Sri Raghav

Admin