ತೆರೆಯ ಮೇಲೆ ‘ನೊಗ್‍ರಾಜ್’

ಈ ಸುದ್ದಿಯನ್ನು ಶೇರ್ ಮಾಡಿ

humbal
ಪುಷ್ಕರ್ ಫಿಲಂಸ್, ಲಾಸ್ಟ್ ಅಂಡ್ ಸೌಂಡ್ ಫಿಲಂಸ್ ಹಾಗೂ ಪರಮ್‍ವಾ ಸ್ಟುಡಿಯೋ ಲಾಂಛನದಲ್ಲಿ ಪುಷ್ಕರ ಮಲ್ಲಿಕಾರ್ಜುನಯ್ಯ, ಹೇಮಂತ್ ಎಂ ರಾವ್ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸಿರುವ ಹಂಬಲ್ ಪೊಲಿಟಿಶಿಯನ್ ನೊಗ್‍ರಾಜ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸಾದ್‍ಖಾನ್ ನಿರ್ದೇಶನದ ಈ ಚಿತ್ರಕ್ಕೆ ದಾನಿಶ್ ಸೇಠ್, ಸಾದ್ ಖಾನ್, ವಂಶಿಧರ್ ಭೋಜರಾಜು ಕಥೆ, ಸಂಭಾಷಣೆ ಬರೆದಿದ್ದಾರೆ. ಶ್ರೀಚರಣ್ ಪಾಕಲ ಸಂಗೀತ ನಿರ್ದೇಶನ, ಕರಮ್ ಚಾವ್ಲಾ ಛಾಯಾಗ್ರಹಣ, ಜಗದೀಶ್, ರಾಮ್ ಶಬರಿ, ಚಾಂದನಿ ಸಂಕಲನ, ರೋಹಿತ್ ನಾಯರ್ ನೃತ್ಯ ನಿರ್ದೇಶನ ಹಾಗೂ ವಿಶ್ವಾಸ್ ಕಶ್ಯಪ್ ಅವರ ಕಲಾನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ದಾನಿಶ್ ಸೇಠ್, ವಿಜಯ್ ಚೆಂಡೂರ್, ಶ್ರುತಿ ಹರಿಹರನ್, ಸುಮುಖಿ ಸುರೇಶ್, ರೋಜರ್ ನಾರಾಯಣ್ ಮುಂತಾದವರಿದ್ದಾರೆ.

Facebook Comments