ದೊಡ್ಡಣ್ಣ ಕೊಟ್ಟ ಶಾಕ್ ಗೆ ತಬ್ಬಿಬ್ಬಾದ ಪಾಕ್’ನಿಂದ ಭಾರತದ ಮೇಲೆ ಗೂಬೆ ಕೂರಿಸವ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Pakistan-Terrorism
ಇಸ್ಲಾಮಾಬಾದ್/ನವದೆಹಲಿ, ಜ.11-ಉಗ್ರಗಾಮಿ ಬಣ ಮತ್ತು ಭಯೋತ್ಪಾದಕರ ನಿಗ್ರಹದಲ್ಲಿ ವಿಫಲವಾಗಿ ಅಮೆರಿಕದಿಂದ ಸೇನಾ ನೆರವು ರದ್ದುಗೊಂಡು ತಬ್ಬಿಬ್ಬಾಗಿರುವ ಪಾಕಿಸ್ತಾನವು ಇದೀಗ ತನ್ನ ತಪ್ಪನ್ನು ಮರೆಮಾಚಲು ಭಾರತದ ವಿರುದ್ಧ ಗೂಬೆ ಕೂರಿಸಲು ಯತ್ನಿಸುತ್ತಿದೆ. ಭಯೋತ್ಪಾದನೆ ನಿಗ್ರಹಕ್ಕಾಗಿ ಪ್ರಾಮಾಣಿಕ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿರುವ ತನ್ನ ಗಮನವನ್ನು ಭಾರತ ಬೇರೆಡೆ ಸೆಳೆದು ಉಗ್ರರ ವಿರುದ್ಧ ಹೋರಾಟಕ್ಕೆ ಅಡ್ಡಿಯಾಗಿದೆ ಎಂದು ಕುಂಟು ನೆಪ ಹೇಳಿದೆ.

ಭಾರತದ ಬೇಹುಗಾರಿಕೆ ಸಂಸ್ಥೆ ರಾ (ಸಂಶೋಧನೆ ಮತ್ತು ವಿಶ್ಲೇಷಣೆ ಘಟಕ) ಪಾಕಿಸ್ತಾನದ ಆಂತರಿಕ ಸ್ಥಿರತೆಗೆ ಧಕ್ಕೆ ಉಂಟು ಮಾಡುತ್ತಿದೆ. ಇದರಿಂದಾಗಿ ಉಗ್ರರನ್ನು ನಿಗ್ರಹಿಸಲು ಪಾಕಿಸ್ತಾನಕ್ಕೆ ಅಡ್ಡಿಯಾಗಿದೆ ಎಂದು ಇಸ್ಲಾಮಾಬಾದ್ ಹೇಳಿಕೆ ನೀಡಿ ಅಮೆರಿಕ ಅನುಕಂಪ ಗಳಿಸಲು ಯತ್ನಿಸುತ್ತಿದೆ. ಇಸ್ಲಾಮಾಬಾದ್‍ನಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸೀಫ್ ಮತ್ತು ಉನ್ನತ ಸೇನಾಧಿಕಾರಿಗಳ ಸಛೆಯಲ್ಲಿ ಭಾರತದ ವಿರುದ್ಧ ಈ ಆರೋಪಗಳನ್ನು ಮಾಡಲಾಗಿದೆ. ಅಲ್ಲದೇ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಈ ಹೇಳಿಕೆಯನ್ನು ಸಮರ್ಥಿಸಿ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವೊಲಿಕೆಗೆ ಪ್ರಯತ್ನ ಮಾಡಿದೆ.

ರಾ ಸಂಸ್ಥೆಯು ನಮ್ಮ ಆಂತಕರಿಕ ಸ್ಥಿರತೆಗೆ ಧಕ್ಕೆ ಉಂಟು ಮಾಡಿದೆ. ಉಗ್ರ ನಿಗ್ರಹಕ್ಕೆ ತಾನು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬಾರದು ಮತ್ತು ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಗೆ ಕೆಟ್ಟ ಹೆಸರು ಬರಬೇಕೆಂಬುದು ಭಾರತದ ಉದ್ದೇಶವಾಗಿದೆ. ಭಯೋತ್ಪಾದಕರ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುತ್ತಿರುವ ತನ್ನ ಗಮನವನ್ನು ಬೇರೆಡೆ ಸೆಳೆಯುತ್ತಿದೆ ಎಂದು ಹೇಳಿಕೆ ನೀಡಿದೆ. ಆದರೆ, ಪಾಕಿಸ್ತಾನದ ಈ ಕುಂಟು ನೆಪದ ಹೇಳಿಕೆಯನ್ನು ಭಾರತದ ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. ಉಗ್ರರ ನಿಗ್ರಹದಲ್ಲಿ ಸಂಪೂರ್ಣ ವಿಫಲವಾಗಿರುವ ಇಸ್ಲಾಮಾಬಾದ್ ತನ್ನ ತಪ್ಪನ್ನು ಮರೆಮಾಚಲು ಈ ಆಧಾರರಹಿತ ಹೇಳಿಕೆ ನೀಡುತ್ತಿದೆ ಎಂದು ಕಟುವಾಗಿ ಟೀಕಿಸಿದೆ.

Facebook Comments

Sri Raghav

Admin