ಮದರಸಾಗಳ ಪಠ್ಯದಲ್ಲಿ ಸಂಸ್ಕೃತ ಮತ್ತು ಕಂಪ್ಯೂಟರ್ ವಿಜ್ಞಾನ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Madarasa--02
ಡೆಹ್ರಾಡೂನ್,ಜ.11-ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತರಾಖಂಡದ ಎಲ್ಲ ಮದರಸಾಗಳ ಪಠ್ಯದಲ್ಲಿ ಸಂಸ್ಕøತ ಮತ್ತು ಕಂಪ್ಯೂಟರ್ ವಿಜ್ಞಾನವನ್ನು ಸೇರಿಸಲು ಮದರಸಾ ಎಜುಕೇಷನ್ ಬೋರ್ಡ್‍ನ ಆರು ಸದಸ್ಯರ ಸಮಿತಿ ನಿರ್ಧರಿಸಿದೆ.  ರಾಜ್ಯದಲ್ಲಿರುವ 297 ನೋಂದಾಯಿತ ಮದರಾಸ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಆಯುಷ್ ಹಾಗೂ ಸಾಮಾಜಿಕ ವಿಜ್ಞಾನವನ್ನು ಐಚ್ಛಿಕ ವಿಷಯವನ್ನಾಗಿ ನೀಡಲಾಗುತ್ತಿದೆ. ರಾಜ್ಯದಲ್ಲಿರುವ ಎಲ್ಲಾ ಮದರಸಾಗಳಲ್ಲಿ ಸಂಸ್ಕೃತವನ್ನು ಕಡ್ಡಾಯವಾಗಿ ಕಲಿಸಬೇಕೆಂದು ಉತ್ತರಾಖಂಡ್ ಮದರಸಾ ವೆಲ್ ಫೇರ್ ಸೊಸೈಟಿ ಅಲ್ಲಿನ ಸರ್ಕಾರದ ಬಳಿ ಮನವಿ ಮಾಡಿದ ಬೆನ್ನಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

Facebook Comments

Sri Raghav

Admin