19ರಂದು ‘ರಾಜು ಕನ್ನಡ ಮೀಡಿಯಂ’ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

1st-rank-raji

ಗುರುನಂದನ್ ನಟಿಸಿರುವ ರಾಜು ಕನ್ನಡ ಮೀಡಿಯಂ ಚಿತ್ರ ಪರಾಕಾಷ್ಠೆಯ ನಿರೀಕ್ಷೆಗಳೊಂದಿಗೆ ಇದೇ ಜನವರಿ 19ರಂದು ಬಿಡುಗಡೆಯಾಗುತ್ತಿದೆ. ಒಂದು ಚಿತ್ರ ತನ್ನೊಳಗಿನ ಕಂಟೆಂಟ್, ಕ್ರಿಯೇಟಿವಿಟಿಗಳ ಮೂಲಕವೇ ಸದ್ದು ಮಾಡೋ ಸಕಾರಾತ್ಮಕ ಪ್ರಕ್ರಿಯೆಗೆ ಸಾಕ್ಷಿಯಂತಿರೋ ಈ ಚಿತ್ರ ಚಿತ್ರೀಕರಣದ ಹಂತದಲ್ಲೆ ನಾನಾ ದಾಖಲೆಗಳಿಗೆ ಕಾರಣವಾಗಿದೆ. ಸುದೀಪ್ ಒಂದು ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿರೋದೂ ಸೇರಿದಂತೆ ನಾನಾ ಆಕರ್ಷಣೆಗಳನ್ನು ಹೊಂದಿರೋ ಈ ಚಿತ್ರವನ್ನು ಕರ್ನಾಟಕ ಮಾತ್ರವಲ್ಲದೇ ಪಕ್ಕದ ರಾಜ್ಯಗಳು ಹಾಗೂ ವಿದೇಶಗಳಲ್ಲೂ ತೆರೆಕಾಣಿಸಲು ನಿರ್ಮಾಪಕ ಕೆ.ಎ.ಸುರೇಶ್ ಯೋಜನೆ ಹಾಕಿಕೊಂಡಿದ್ದಾರಂತೆ. ಹಾಗೆಯೇ ನಿರ್ಮಾಪಕ ಸುರೇಶ್‍ಮಾತನಾಡುತ್ತಾ, ಈ ಚಿತ್ರ ಆರಂಭವಾಗಲು ಮುಖ್ಯ ಕಾರಣ ಪಿಆರ್‍ಒ ನಾಗೇಂದ್ರರವರು. ನನಗೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ಆರಂಭದ ಚಿತ್ರದಿಂದ ಹಿಡಿದು ಇಲ್ಲಿಯವರೆಗೂ ಪ್ರೋತ್ಸಾಹ ನೀಡುತ್ತಾ ಬಂದಿದ್ದು , ಪ್ರತಿ ಹಂತದಲ್ಲೂ ಹೇಗೆ ಸಾಗಬೇಕು ಎಂದು ಮಾರ್ಗದರ್ಶನ ಕೊಟ್ಟಿದ್ದಾರೆ.

ಅದೇ ರೀತಿ ಫಸ್ಟ್ ರ್ಯಾಂಕ್ ರಾಜು ತಂಡದ ಬಹುತೇಕರನ್ನು ನನ್ನ ಈ ಚಿತ್ರಕ್ಕೆ ಬಳಸಿಕೊಂಡಿದ್ದೇನೆ. ಎಲ್ಲರ ಸಹಕಾರವೂ ಅಷ್ಟೇ ಉತ್ತಮವಾಗಿ ನೀಡುವ ಮೂಲಕ ಒಂದು ಸದಭಿರುಚಿಯ ಚಿತ್ರವನ್ನು ಮಾಡಿಕೊಟ್ಟಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹ ನಿರಂತರವಾಗಿ ಸಿಗಲಿ ಎಂದು ಕೇಳಿಕೊಂಡರು. ತನ್ನ ಪ್ರಥಮ ಚಿತ್ರದಲ್ಲೇ ಯಶಸ್ವಿ ನಿರ್ದೇಶಕ ಎಂದು ಗುರುತಿಸಿಕೊಂಡ ನರೇಶ್‍ಕುಮಾರ್ ನಿರ್ದೇಶನದ ಎರಡನೆ ಚಿತ್ರ ಇದಾಗಿದೆ. ಇನ್ನು ಚಿತ್ರದ ನಾಯಕ ಗುರುನಂದನ್ ಮಾತನಾಡುತ್ತಾ , ಕನ್ನಡ ಮೀಡಿಯಂ ಹುಡುಗನೊಬ್ಬ ಹಳ್ಳಿಯಿಂದ ಸಿಟಿಗೆ ಬಂದು ಸಾಧನೆ ಮಾಡಲು ಬಂದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ. ಅದನ್ನು ಹೇಗೆ ನಿಭಾಯಿಸಿ ನಿಲ್ಲುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಹಾಗೆಯೇ ಸುದೀಪ್‍ರೊಂದಿಗೆ ಅಭಿನಯಿಸಿರುವುದು ನನ್ನ ಪುಣ್ಯ ಎಂದು ಹೇಳಿಕೊಂಡರು.

ನಂತರ ನಾಯಕಿ ಆಶಿಕಾ ರಂಗನಾಥ್ ಮಾತನಾಡುತ್ತಾ, ನಾನು ಒಂದು ಮುಗ್ಧ ಹಳ್ಳಿ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಮಲೆನಾಡು ಭಾಗದ ಶಾಲೆಗೆ ಹೋಗುವ ಹೆಣ್ಣು ಮಗಳು ಹೇಗಿರುತ್ತಾಳೆ ಎಂಬುದನ್ನು ಬಹಳ ಸೊಗಸಾಗಿ ತೋರಿಸಿದ್ದಾರೆ ಎಂದರು. ಈ ಚಿತ್ರದಲ್ಲಿ ಮತ್ತೊಬ್ಬ ನಾಯಕಿ ಅವಂತಿಕಾ ಶೆಟ್ಟಿ ಅಭಿನಯಿಸಿದ್ದು, ವಿದೇಶಿ ಮೂಲದ ಮಾಡೆಲ್ ಏಂಜಲೀನಾ ಕೂಡ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದು , ಹೃದಯ ಶಿವ ಸಾಹಿತ್ಯವನ್ನು ರಚಿಸಿದ್ದಾರೆ. ಬಹಳಷ್ಟು ನಿರೀಕ್ಷೆ ಇರುವ ರಾಜು ಕನ್ನಡ ಮೀಡಿಯಂ ಅದ್ಧೂರಿಯಾಗಿ ಮುಂದಿನ ವಾರ ತೆರೆಯ ಮೇಲೆ ಬರಲಿದೆ.

Facebook Comments