ಲಂಡನ್ : ಸಿಗರೇಟ್ ಕೊಡದಿದ್ದಕ್ಕೆ ಭಾರತೀಯನ ಕಗ್ಗೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Indian-Killed

ಲಂಡನ್, ಜ.11-ಅಮೆರಿಕ ಮತ್ತು ಇಂಗ್ಲೆಂಡ್‍ನಲ್ಲಿ ಭಾರತೀಯ ಮೂಲದ ವ್ಯಕ್ತಿಗಳ ಮೇಲೆ ಹಿಂಸಾಚಾರ ಮುಂದುವರಿದಿದೆ. ಉತ್ತರ ಲಂಡನ್‍ನಲ್ಲಿ ತನ್ನ ಅಂಗಡಿಯಲ್ಲಿ ಅಪ್ರಾಪ್ತರಿಗೆ ಸಿಗರೇಟ್ ನೀಡಲು ನಿರಾಕರಿಸಿದ ಭಾರತೀಯ ಮೂಲದ ವ್ಯಕ್ತಿಯನ್ನು ಭೀಕರವಾಗಿ ಥಳಿಸಿ ಹತ್ಯೆ ಮಾಡಲಾಗಿದೆ. ವಿಜಯ್ ಪಟೇಲ್(49) ದುಷ್ಕರ್ಮಿಗಳ ಮರಣಾಂತಿಕ ಹಲ್ಲೆಗೆ ಬಲಿಯಾದ ನತದೃಷ್ಟ ಭಾರತೀಯ. ಲಂಡನ್‍ನ ಮಿಲ್‍ಹಿಲ್ ಎಂಬಲ್ಲಿ ಈ ಘಟನೆ ನಡೆದಿದೆ.

ಪಟೇಲ್ ದಿನಬಳಕೆಯ ವಸ್ತುಗಳ ಮಳಿಗೆ ನಡೆಸುತ್ತಿದ್ದರು. ಶನಿವಾರ ರಾತ್ರಿ ಅಲ್ಲಿಗೆ ಬಂದ ಅಪ್ರಾಪ್ತರು ಸಿಗರೇಟ್ ನೀಡುವಂತೆ ಪಟೇಲ್‍ರನ್ನು ಕೇಳಿದರು. ಆದರೆ ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳನ್ನು ಮಾರುವುದು ಇಂಗ್ಲೆಂಡ್‍ನಲ್ಲಿ ನಿಷೇಧ ಇರುವ ಕಾರಣ ಅವರು ಸಿಗರೇಟ್ ನೀಡಲು ನಿರಾಕರಿಸಿದರು. ಇದರಿಂದ ಕುಪಿತಗೊಂಡ ಬಾಲಕರ ಗುಂಪು ಅವರನ್ನು ಮನಬಂದಂತೆ ಥಳಿಸಿತು. ತಲೆಗೆ ತೀವ್ರ ಪೆಟ್ಟು ಬಿದ್ದ ವಿಜಯ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಅವರು ಕೊನೆಯುಸಿರೆಳೆದರು. ಈ ಪ್ರಕರಣದ ಸಂಬಂಧ 16 ವರ್ಷದ ಆರೋಪಿಯೊಬ್ಬನ್ನು ಬಂಧಿಸಲಾಗಿದ್ದು, ಉಳಿದವರಿಗೆ ಶೋಧ ಮುಂದುವರಿದಿದೆ. ಅಮೆರಿಕದಲ್ಲಿ ಕೆಲವು ತಿಂಗಳ ಹಿಂದೆ ಸಿಗರೇಟ್ ನೀಡಲು ನಿರಾಕರಿಸಿದ್ದ ಭಾರತೀಯ ಮೂಲದ ಅಂಗಡಿ ಮಾಲೀಕನನ್ನು ದುಷ್ಕರ್ಮಿಗಳು ಕೊಂದಿದ್ದರು.

Facebook Comments

Sri Raghav

Admin