ಹೆಲ್ಮೆಟ್ ಹಾಕದೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಆಸ್ಪತ್ರೆ ಸೇರಿದ ಬೈಕ್ ಸವಾರ

ಈ ಸುದ್ದಿಯನ್ನು ಶೇರ್ ಮಾಡಿ

Bike-Accident--01

ಮೈಸೂರು,ಜ.11-ಹೆಲ್ಮೆಟ್ ತಪಾಸಣೆ ವೇಳೆ ಬೈಕ್ ಸವಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಮಂಡಿ ಮೊಹಲ್ಲಾದ ನಿವಾಸಿ ಶಫೀವುಲ್ಲ(35) ಗಾಯಗೊಂಡ ಸವಾರ. ಈತ ಮೈಸೂರು ಹೊರವಲಯದ ಕೊಲಂಬಿಯ ಏಷ್ಯಾ ಆಸ್ಪತ್ರೆ ಬಳಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದನು. ಈ ವೇಳೆ ಎನ್.ಆರ್.ಸಂಚಾರಿ ಠಾಣೆ ಪೊಲೀಸರು ತಪಾಸಣಾ ಕಾರ್ಯಾಚರಣೆಯಲಿದ್ದನ್ನು ಕಂಡ ಶಫೀವುಲ್ಲಾ ಅವರಿಂದ ತಪ್ಪಿಸಿಕೊಳ್ಳು ಮುಂದಾಗಿದ್ದಾನೆ.

ಈ ವೇಳೆ ಬೈಕ್‍ನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದನು. ತಕ್ಷಣವೇ ಪೊಲೀಸರು ಆತನನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin