14 ತಿಂಗಳಲ್ಲಿ 3,500 ಕೋಟಿ ರೂ. ಬೇನಾಮಿ ಆಸ್ತಿ ಜಪ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

Benami--01

ನವದೆಹಲಿ, ಜ.11- ಆದಾಯ ತೆರಿಗೆ ಅಧಿಕಾರಿಗಳು ಕಳೆದ 14 ತಿಂಗಳ ಅವಧಿಯಲ್ಲಿ 3,500 ಕೋಟಿ ರೂ. ಮೌಲ್ಯದ 900ಕ್ಕೂ ಹೆಚ್ಚು ಬೇನಾಮಿ ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.  ನ.1, 2016ರಿಂದ ಜಾರಿಗೆ ಬಂದಿರುವ ಬೇನಾಮಿ ಆಸ್ತಿ ವ್ಯವಹಾರಗಳ ನಿಷೇಧ ಕಾಯ್ದೆಯಡಿ ಕಾರ್ಯಾಚರಣೆ ನಡೆಸಿರುವ ಐಟಿ ಅಧಿಕಾರಿಗಳು ಈವರೆಗೆ ಫ್ಲಾಟ್‍ಗಳು, ಅಂಗಡಿಗಳು, ಆಭರಣಗಳು ಮತ್ತು ವಾಹನಗಳು ಸೇರಿದಂತೆ 900ಕ್ಕೂ ಹೆಚ್ಚು ಬೇನಾಮಿ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 3,500 ಕೋಟಿ ರೂ.ಗಳು ಎಂದು ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Facebook Comments

Sri Raghav

Admin