ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿ ಮೇಲೆ ಹಲ್ಲೆ ಮಾಡಿ ನೇಣಿಗೆ ಶರಣಾದ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

Suicide--01

ಬೆಂಗಳೂರು. ಜ.12 : ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಗೆ ಮಚ್ಚಿನಿಂದ ಹಲ್ಲೆ ನಡೆಸಿ ತಾನು ನೇಣಿಗೆ ಶರಣಾಗಿರುವ ಘಟನೆ ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಮೂರ್ತಿನಗರ ಮುಖ್ಯರಸ್ತೆಯ ಸೆಂಟ್ ಆನ್ಸ್ ಶಾಲೆ ಬಳಿ ನಡೆದಿದೆ. ಮೃತಪಟ್ಟವನನ್ನು ಆಟೋ ಚಾಲಕ ಹೆನ್ರಿ ಫರ್ನಾಂಡಿಸ್( 35 ) ಎಂದು ತಿಳಿದು ಬಂದಿದೆ. ಇನ್ನು ಘಟನೆಯಲ್ಲಿ ಮಚ್ಚಿನಿಂದ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಪತ್ನಿ ಚಿತ್ರಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಚಿತ್ರಾ ಹಾಗೂ ಹೆನ್ರಿ ಫರ್ನಾಂಡಿಸ್ 10 ವರ್ಷಗಳ ಹಿಂದೆ ಅಂತರ್ಜಾತಿ ವಿವಾಹ ಆಗಿದ್ದ ದಂಪತಿಗಳಿಗೆ 2 ಮಕ್ಕಳು ಇದ್ದು, ಕಳೆದ 2-3 ವರ್ಷಗಳಿಂದ ಗಂಡ ಹೆಂಡತಿ ನಡುವೆ ಮನಸ್ತಾಪವಿತ್ತು ಎನ್ನಲಾಗಿದೆ. ಚಿತ್ರ ಕಳೆದ 10 ದಿನಗಳಿಂದ ತನ್ನ ತವರು ಮನೆ ದೇವಸಂದ್ರ ವಾಸವಿದ್ದರು ಎನ್ನಲಾಗಿದೆ. ಇದೇ ವೇಳೆ ಇಂದು ಚಿತ್ರಾಳನನ್ನ ಗಂಡ ಹೆನ್ರಿ ರಾಮಮೂರ್ತಿನಗರದ ತನ್ನ ಮನೆಗೆ ಕರೆ ತಂದು ತಮ್ಮ ಇಬ್ಬರು ಮಕ್ಕಳನ್ನ. 9 ಗಂಟೆಗೆ ಶಾಲೆಗೆ ಕಳುಹಿಸಿ ಅಂದಾಜು 12 ಗಂಟೆ ಸುಮಾರಿಗೆ ಕತ್ತಿಯಿಂದ ಚಿತ್ರಾಳ ಕೈ, ತಲೆಯ ಹಿಂಬದಿಗೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಘಟನೆ ನಡೆದ ಕೂಡಲೇ ಹೆನ್ರಿ ಫರ್ನಾಂಡಿಸ್ ತನ್ನ ಹೆಂಡತಿ ಸತ್ತಳೆಂದು ಭಾವಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೇ ವೇಳೆ ಚಿತ್ರಾಳ ತಾಯಿ ಮನೆಯಿಂದ ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಅನುಮಾನಗೊಂಡ ಚಿತ್ರಾಳ ಸಹೋದರ ಮಹೇಂದ್ರ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೆಆರ್ ಪುರ ಪೋಲಿಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Facebook Comments

Sri Raghav

Admin