ಇನ್ನು ಮುಂದೆ ಪಾಸ್‍ಪೋರ್ಟ್’ನ್ನು ಗುರುತು ಚೀಟಿಯಾಗಿ ಉಪಯೋಗಿಸುವ ಹಾಗಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

passport

ಹೊಸದಿಲ್ಲಿ,ಜ.12-ವಿಳಾಸದ ಪುರಾವೆಯಾಗಿ ಅಥವಾ ಗುರುತಿನ ಚೀಟಿಯಾಗಿ ಇನ್ನು ಮುಂದೆ ಪಾಸ್‍ಪೋರ್ಟ್ ಉಪಯೋಗಿಸುವ ಹಾಗಿಲ್ಲ. ಏಕಂತೀರಾ, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಮುಂದೆ ಸದ್ಯ ಇರುವ ಪ್ರಸ್ತಾವನೆಗೆ ಅಂಟಿಕೊಂಡಲ್ಲಿ ಪಾಸ್ಪೋರ್ಟ್ ಹೊಂದಿರುವವರ ವಿಳಾಸವಿರುವ ಅಂತಿಮ ಪುಟ ಇರಲಿಕ್ಕಿಲ್ಲ.  ಈ ಬಗ್ಗೆ ವಿದೇಶಾಂಗ ಸಚಿವಾಲಯ ಹೆಚ್ಚಿನೇನೂ ಮಾಹಿತಿ ನೀಡದೇ ಇದ್ದರೂ, ಇಂತಹ ಬದಲಾವಣೆಯೊಂದು ಹೊಸ ಸರಣಿಯ ಪಾಸ್ಪೋರ್ಟï ಗಳ ಮುದ್ರಣ ಆದಾಗ ಆಗಬಹುದೆಂದು ಪಾಸ್‍ಪೋಟ್ ಹಾಗೂ ವೀಸಾ ವಿಭಾಗದ ಅಧೀನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಹೇಳಿದ್ದಾರೆ. ಸಂಬಂಧಿತ ಮಾಹಿತಿಗಳ ಗೌಪ್ಯತೆ ಕಾಪಾಡಲು ಪಾಸ್‍ಪೋರ್ಟ್‍ನ ಅಂತಿಮ ಪುಟವನ್ನು ಖಾಲಿ ಬಿಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಪಾಸ್‍ಪೋರ್ಟ್ ಬಣ್ಣಗಳಲ್ಲಿಯೂ ಕೆಲವೊಂದು ಬದಲಾವಣೆ ತರಲು ಸಚಿವಾಲಯ ಚಿಂತಿಸುತ್ತಿದ್ದು, ಸರಕಾರಿ ಅಧಿಕಾರಿಗಳ, ರಾಜತಾಂತ್ರಿಕರ ಹಾಗೂ ಇತರರ ಪಾಸ್‍ಪೋರ್ಟ್‍ಗಳು ಕ್ರಮವಾಗಿ ಬಿಳಿ, ಕೆಂಪು ಹಾಗೂ ನೀಲಿ ಬಣ್ಣದ್ದಾಗಿದ್ದರೆ, ಇನ್ನು ಮುಂದೆ ಇಮಿಗ್ರೇಶನ್ ಚೆಕ್ಕಿಂಗಿಗೆ ಒಳಗಾಗಬೇಕಾದವರಿಗೆ ನೀಡಲಾಗುವ ಪಾಸ್‍ಪೋರ್ಟ್ ಕೇಸರಿ ಬಣ್ಣದ್ದಾಗಿರಲಿದೆ. ಈ ಪಾಸ್ಪೋರ್ಟ್‍ಗಳು ನಾಸಿಕ್‍ನಲ್ಲಿರುವ ಇಂಡಿಯಾ ಸೆಕ್ಯುರಿಟಿ ಪ್ರೆಸ್‍ನಲ್ಲಿ ಮುದ್ರಣಗೊಳ್ಳಲಿವೆ. ಸದ್ಯ ಪಾಸ್ಪೋರ್ಟಿನ ಪ್ರಥಮ ಪುಟದಲ್ಲಿ ಪಾಸ್ಪೋರ್ಟ್ ಹೊಂದಿರುವಾತನ ಫೋಟೋ ಮತ್ತಿತರ ಮಾಹಿತಿಯಿದ್ದರೆ ಅಂತಿಮ ಪುಟದಲ್ಲಿ ವಿಳಾಸವಿರುತ್ತದೆ. ಅದರೆ ಅಲ್ಲಿ ವಿಳಾಸವಿಲ್ಲದೇ ಇದ್ದರೂ ಪಾಸ್ಪೋರ್ಟ್ ಕಚೇರಿ ಹಾಗೂ ಇಮಿಗ್ರೇಶನ್ ಇಲಾಖೆ ಮೇಲೆ ಯಾವುದೇ ಪರಿಣಾಮ ಬೀರದು, ಏಕೆಂದರೆ ಅವರ ಬಳಿ ಪಾಸ್ಪೋಟ್ ಹೊಂದಿರುವವನ ಎಲ್ಲಾ ವಿವರಗಳು ಇರುತ್ತವೆ. 2012ರಿಂದ ಎಲ್ಲಾ ಪಾಸ್‍ಪೋರ್ಟ್‍ಗಳಲ್ಲಿ ಬಾರ್ ಕೋಡ್‍ಗಳಿರುವುದರಿಂದ ಇವುಗಳನ್ನು ಸ್ಕ್ಯಾನ್ ಮಾಡಿದರೆ ಸಾಕು ಎಲ್ಲಾ ಮಾಹಿತಿ ಲಭ್ಯವಾಗುತ್ತದೆ. ಬದಲಾವಣೆಯೊಂದಿಗೆ ಹೊಸ ಪಾಸ್ಪೋರ್ಟ್ ಜಾರಿಗೆ ಬಂದರೂ ಈಗಿನ ಪಾಸ್‍ಪೋಟ್‍ಗಳು ಅವುಗಳ ಕೊನೆಯ ದಿನಾಂಕದವರೆಗೂ ಊರ್ಜಿತದಲ್ಲಿರುತ್ತವೆ.

Facebook Comments

Sri Raghav

Admin