ಗಡಿಯಲ್ಲಿ ಮತ್ತೆ ಪಾಕಿಗಳ ಪುಂಡಾಟ

Firing--0141

ಶ್ರೀನಗರ, ಜ.12-ಭಾರತ ಸೇನಾ ಪಡೆಗಳು ನಡೆಸಿದ ಮಿಂಚಿನ ದಾಳಿಯಿಂದ ತಬ್ಬಿಬ್ಬಾಗಿದ್ದ ಪಾಕಿಸ್ತಾನಿ ಯೋಧರು ಮತ್ತೆ ಕಣಿವೆ ರಾಜ್ಯದಲ್ಲಿ ಪುಂಡಾಟ ಆರಂಭಿಸಿದ್ದಾರೆ. ಜ ಮ್ಮು ಮತ್ತು ಕಾಶ್ಮೀರದ ಉರಿ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಮುಂಚೂಣಿ ಸೇನಾ ನೆಲೆಗಳ ಮೇಲೆ ಪಾಕಿಸ್ತಾನಿ ಸೇನಾ ಪಡೆಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಪ್ರಚೋದಿತ ದಾಳಿಯಲ್ಲಿ ಸಾವು-ನೋವು ಸಂಭವಿಸಿಲ್ಲ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಉರಿ ವಲಯದ ಕಮಲ್‍ಕೋಟ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಪಾಕ್ ಯೋಧರು ಕದನ ವಿರಾಮ ಉಲ್ಲಂಘಿಸಿದ್ದಾರೆ. ಪಾಕಿಸ್ತಾನ ದಾಳಿಗೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin