ಜನಾಂಗೀಯ ದ್ವೇಷಕ್ಕೆ ಬಲಿಯಾದ ಭಾರತದ ಟೆಕ್ಕಿ ಶ್ರೀನಿವಾಸ್ ಕುಚಿಭೋಟ್ಲಾ ಪತ್ನಿಗೆ ಟ್ರಂಪ್ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಜ.12-ಜನಾಂಗೀಯ ದ್ವೇಷಕ್ಕೆ ಬಲಿಯಾದ ಭಾರತದ ಟೆಕ್ಕಿ ಶ್ರೀನಿವಾಸ ಕುಚಿಭೋಟ್ಲಾ ಅವರ ವಿಧವಾ ಪತ್ನಿ ಸುನಯನಾ ದುಮಾಲಾ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಥಮ ಸಮುದಾಯ ಸಭೆ ಭಾಷಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.  ಕಳೆದ ವರ್ಷ ಅಮೆರಿಕದ ಒಲಾಥೆ ನಗರದ ಬಾರೊಂದರಲ್ಲಿ ಅಮೆರಿಕದ ನೌಕಾಪಡೆ ನಿವೃತ್ತ ಯೋಧನೊಬ್ಬ ಶ್ರೀನಿವಾಸ್ ಕುಚಿಭೋಟ್ಲಾ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಪತಿ ಹತರಾದ ನಂತರ ವಿಚಲಿತರಾಗಿದ್ದ ಅವರು ಅಲ್ಲಿ ವಾಸ ಮಾಡುವ ಹಕ್ಕನ್ನು ಕಾನೂನಿನ ಪ್ರಕಾರ ಕಳೆದುಕೊಂಡಿದ್ದರು. ಆದರೆ ಕಾಂಗ್ರೆಸ್ ಸಂಸದರು ಕಾನೂನು ಸಮರ ನಡೆಸಿ ಅವರು ಅಮೆರಿಕದಲ್ಲೇ ನೆಲೆಸುವಂತೆ ಮಾಡುವಲ್ಲಿ ಸಫಲರಾಗಿದ್ದರು. ವಾಷಿಂಗ್ಟನ್‍ನಲ್ಲಿ ಜ.30ರಂದು ಸಮುದಾಯ ಜಂಟಿ ಅಧಿವೇಶನದಲ್ಲಿ ಟ್ರಂಪ್ ಮಾತನಾಡಲಿದ್ದು, ಸುನಯನಾ ಅವರು ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ ಎಂದು ಕಾಂಗ್ರೆಸ್ ಸಂಸದ ಕೆವಿನ್ ಯೊಡೆರ್ ತಿಳಿಸಿದ್ದಾರೆ.

ವ್ಯವಸ್ಥೆ ವೈಫಲ್ಯದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಈಕೆ. ವಲಸೆ ವಿವಾದದಲ್ಲಿ ಕಾನೂನು ಹೋರಾಟ ನಡೆಸಿ ಅವರು ಜಯಶೀಲರಾಗಿದ್ದಾರೆ. ಆ ಮೂಲಕ ಭಾರತೀಯ ಸಮುದಾಯ ಮತ್ತು ಇತರ ವಲಸಿಗರಲ್ಲಿ ನೈತಿಕ ಸ್ಥೈರ್ಯ ತುಂಬಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಅವರನ್ನು ಗೌರವದಿಂದ ಸಭೆಗೆ ಆಹ್ವಾನಿದ್ದೇವೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin