ಭಾರತೀಯ ಮೂಲದ ವಲಸೆ ಕಾರ್ಯಕರ್ತ ಬಂಧನ. ತಕ್ಷಣ ಗಡೀಪಾರು ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Raghubir--02

ವಾಷಿಂಗ್ಟನ್, ಜ.12-ಟ್ರಿನಿಡಾಡ್ ಮತ್ತು ಟಬಾಗೋ ಮೂಲದ ಭಾರತೀಯ ಸಂಜಾತ ಮತ್ತು ವಲಸೆ ಹಕ್ಕುಗಳ ಕಾರ್ಯಕರ್ತ ರವಿ ರಘುಬಿರ್ ಅವರನ್ನು ಅಮೆರಿಕದ ವಲಸೆ ಮತ್ತು ಸುಂಕ ಅಧಿಕಾರಿಗಳು ಕಾನೂನು ಉಲ್ಲಂಘನೆ ಆರೋಪದ ಮೇಲೆ ಬಂಧಿಸಿದ್ದಾರೆ. ಅಲ್ಲದೇ ಅವರು ಸ್ವದೇಶಕ್ಕೆ ಹಿಂದಿರುಗುವಂತೆ ಆದೇಶ ನೀಡಿದ್ದು, ಇದು ನ್ಯೂಯಾರ್ಕ್‍ನಲ್ಲಿ ಸ್ಥಳೀಯ ಸಮುದಾಯವನ್ನು ಕೆರಳಿಸಿದೆ.

ವಲಸೆ ಮತ್ತು ಸೀಮಾಸುಂಕ ಜಾರಿ ನಿರ್ದೇಶನಾಲಯ(ಐಇಸಿ) ಅಧಿಕಾರಿಗಳು ಎಂದಿನಂತೆ ವಲಸಿಗರ ತಪಾಸಣೆ ನಡೆಸುತ್ತಿದ್ದ ವೇಳೆ ರವಿ ಅವರು ನಿಯಮ ಉಲ್ಲಂಘಿಸಿರುವುದು ಪತ್ತೆಯಾಯಿತು. ತಕ್ಷಣ ಅವರನ್ನು ಬಂಧಿಸಿ ಗಡಿಪಾರು ಮಾಡಲು ಆದೇಶಿಸಲಾಯಿತು. ಅವರ ಬಂಧನ ಮತ್ತು ಗಡಿಪಾರು ಆದೇಶದ ವಿರುದ್ಧ ನ್ಯೂಯಾರ್ಕ್‍ನಲ್ಲಿರುವ ಅವರ ಬೆಂಬಲಿಗರು, ವಲಸಿಗರು ಮತ್ತು ಭಾರತೀಯ ಮೂಲದ ಅಮೆರಿಕನ್ನರು ಜಾಕೋಬ್ ಜಾವಿಟ್ಸ್ ಫೆಡರಲ್ ಕಟ್ಟಡದ ಬಳಿ (ರವಿ ಬಂಧಿತರಾದ ಸ್ಥಳ) ಪ್ರತಿಭಟನೆ ನಡೆಸಿದರು.

Facebook Comments

Sri Raghav

Admin