ಮಲ್ಟಿಸ್ಟಾರ್‍ ಗಳ ‘ಸೀಜರ್’

ಈ ಸುದ್ದಿಯನ್ನು ಶೇರ್ ಮಾಡಿ

seizer
ಚಂದನವನದಲ್ಲಿ ಮಲ್ಟಿಸ್ಟಾರ್‍ಗಳ ಚಿತ್ರಗಳು ಸಾಲು ಸಾಲಾಗಿ ಬರುತ್ತಿವೆ. ಆ ನಿಟ್ಟಿನಲ್ಲಿ ಬಂದಂತಹ ಬಹುತೇಕ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಮುಂದೆ ಸಾಗುತ್ತಿವೆ. ಇಂಥದ್ದೇ ವಿಭಿನ್ನ ಕಥಾಹಂದರವಾದ ಚಿತ್ರ ಸೀಜರ್ ತೆರೆ ಮೇಲೆ ಬರಲು ಸಿದ್ದವಾಗುತ್ತಿದ್ದು , ಇತ್ತೀಚೆಗೆ ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ಸ್ಟಾರ್ ಹೋಟೆಲ್‍ವೊಂದರಲ್ಲಿ ನೆರವೇರಿತು. ಕ್ರೇಜಿಸ್ಟಾರ್ ರವಿಚಂದ್ರನ್, ಚಿರಂಜೀವಿ ಸರ್ಜಾ ಅಭಿನಯದ ಈ ಚಿತ್ರವನ್ನು ಮೊದಲ ಬಾರಿಗೆ ಕತೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ವಿನಯ್ ಕೃಷ್ಣ . ಚಿತ್ರದ ಬಗ್ಗೆ ಮಾತನಾಡಿದ ವಿನಯ್ ಕೃಷ್ಣ ಇದೊಂದು ಸ್ವಮೇಕ್ ಚಿತ್ರವಾಗಿದ್ದು ಎಲ್ಲಾ ಪರಿಣಿತ ತಂತ್ರಜ್ಞರೇ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಕಮರ್ಷಿಯಲ್, ಆ್ಯಕ್ಷನ್, ಫ್ಯಾಮಿಲಿ ಕಂಟೆಂಟ್ ಹೊಂದಿರುವ ಈ ಚಿತ್ರದಲ್ಲಿ ರವಿಚಂದ್ರನ್, ಚಿರಂಜೀವಿ ಸರ್ಜಾ ಜೊತೆಗೆ ಪಾರುಲ್ ಯಾದವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯನಟ ಪ್ರಕಾಶ್ ರೈ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಪ್ರೇಕ್ಷಕರನ್ನು ನಗಿಸಲೆಂದೇ ಸಾಧುಕೋಕಿಲ ಇದ್ದಾರೆ ಎಂದು ಹೇಳಿದರು.

ನಂತರ ಚಿತ್ರದ ಕಥೆಯ ಬಗ್ಗೆ ಮಾತ ನಾಡುತ್ತ ಬೆಂಗಳೂರಿನಲ್ಲಿ ನಡೆದ ಕೆಲ ಘಟನೆಗಳನ್ನು ಈ ಚಿತ್ರದ ಕಥೆಯಲ್ಲಿ ತೆಗೆದುಕೊಳ್ಳಲಾಗಿದೆ. ದಿನಕ್ಕೆ ಸುಸ್ತಿದಾರರ 500ಕ್ಕೂ ಹೆಚ್ಚು ವಾಹನಗಳು ಸೀಜ್ ಆಗುತ್ತದೆ. ಹಾಗೆ ವಾಹ ನಗಳನ್ನು ಸೀಜ್ ಮಾಡಿ ದಾಗ ಏನೇನು ಅವಾಂತ ರಗಳು ನಡೆಯುತ್ತವೆ ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರದಲ್ಲಿ ಹೇಳಲಾಗಿದೆ. ಫೈನಾನ್ಷಿಯರ್ ಪಾತ್ರದಲ್ಲಿ ನಟ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಇನ್ನು ಖಳನಟನಾಗಿ ಪ್ರಕಾಶ್ ರೈ ನಟಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಕ್ಲೈಮಾಕ್ಸ್ ದೃಶ್ಯವನ್ನು ಶಬರಿಮಲೈನಲ್ಲಿ ಚಿತ್ರೀಕರಿಸಲಾಗಿದೆ. ಟೆಕ್ನಿಕ್‍ಲ್ಲಿ ಚಿತ್ರದ ಕ್ವಾಲಿಟಿ ಉತ್ತಮವಾಗಿ ಮೂಡಿಬರಬೇಕೆಂಬ ಉದ್ದೇಶದಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗಾಗಿಯೇ 18 ತಿಂಗಳು ಸಮಯ ತೆಗೆದುಕೊಂಡಿದ್ದೇವೆ ಎಂದು ಹೇಳಿದರು. ಚಿತ್ರದ ನಾಯಕನಟ ಚಿರಂಜೀವಿ ಸರ್ಜಾ ಹೇಳುವಂತೆ ಇದೊಂದು ಸೇಡಿನ ಕಥಾನಕ ಹೊಂದಿದ ಚಿತ್ರವಾಗಿದೆ.

ನಾನು ರವಿಚಂದ್ರನ್ ಅವರ ಸಹಾಯಕನಾಗಿ ಅಭಿನಯಿಸಿದ್ದು ಖುಷಿ ತಂದಿದೆ. ಸೆಟ್‍ನಲ್ಲಿ ಅವರಿಂದ ಸಾಕಷ್ಟು ಕಲಿತಿದ್ದೇನೆ. ಸೀಜ್ ಮಾಡುವ ವಾಹನಗಳ ಹಿಂದೆ ಕುಟುಂಬದ ಘಟನೆಯೊಂದು ಇರುತ್ತದೆ. ದೃಶ್ಯಗಳು ಚೆನ್ನಾಗಿ ಬರಲೆಂದು ನಿರ್ಮಾಪಕರು ಎಲ್ಲೂ ರಾಜಿಯಾಗಿಲ್ಲ ಎಂದು ಹೇಳಿದರು. ತೆಲುಗು ನಟ ನಾಗಿನೀಡು ಮಾತನಾಡಿ, ಪ್ರಕಾಶ್ ರೈ ಅವರ ಜೊತೆ ಪಾತ್ರ ನಿರ್ವಹಿಸಿದ್ದು, ನನಗೆ ಅವಕಾಶ ನೀಡಿದ್ದಕ್ಕೆ ನಿರ್ದೇಶಕರಿಗೆ ಥ್ಯಾಂಕ್ಸ್ ಅಂತ ಕನ್ನಡದಲ್ಲಿ ಹೇಳಿದರು. ಕೈಗಾರಿಕೋದ್ಯಮಿ ಹಾಗೂ ನಿರ್ಮಾಪಕ ತ್ರಿವಿಕ್ರಮ್ ಸಾಪಲ್ಯ ಮಾತನಾಡಿ, ಇದು ನನ್ನ ಎರಡನೆ ಪ್ರಯತ್ನ. ನಿರ್ದೇಶಕ ವಿನಯ್ ಕೃಷ್ಣ ಅವರು ಈ ಕಥೆಯನ್ನು ಹೇಳಿದ ರೀತಿ ನನಗೆ ಇಷ್ಟವಾಯಿತು. ಆ ಕಾರಣದಿಂದಲೇ ಬಂಡವಾಳ ಹಾಕಿದ್ದೇನೆ ಎಂದು ಹೇಳಿದರು.

ಅದ್ದೂರಿ ವೇದಿಕೆಯಲ್ಲಿ ನೆರೆದಿದ್ದ ಗಣ್ಯರ ಸಮ್ಮುಖದಲ್ಲಿ ಸೀಜರ್ ಚಿತ್ರದ ಹಾಡುಗಳ ಧ್ವನಿಸಾಂದ್ರಿಕೆ ಅನಾವರಣಗೊಂಡವು. ಸದ್ಯ ಬಿಗ್‍ಬಾಸ್ ಮನೆಯಲ್ಲಿ ಅತಿಥಿಯಾಗಿರುವ ಚಂದನ್ ಶೆಟ್ಟಿ ಪ್ರಥಮ ಬಾರಿಗೆ ಸಂಗೀತ ಸಂಯೋಜಿಸಿರುವ ಚಿತ್ರವಿದು. ಇತರ ಕಲಾವಿದರಾದ ವಿಜಯ್ ಚೆಂಡೂರು, ಡ್ಯಾನಿ ಕುಟ್ಟಪ್ಪ ಹಾಗೂ ಸಂಭಾಷಣೆ ಬರೆದ ಶ್ರೀಕಾಂತ್, ಛಾಯಗ್ರಾಹಕರಾದ ರಾಜೇಶ್ ಕಟ್ಟ ಕೂಡ ಸಮಾರಂಭದಲ್ಲಿ ಹಾಜರಿದ್ದರು. ಬಹಳ ಅದ್ಧೂರಿಯಾಗಿ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿದ್ದು, ಅತಿಶೀಘ್ರದಲ್ಲಿ ಚಿತ್ರ ಬೆಳ್ಳಿಪರದೆ ಮೇಲೆ ರಾರಾಜಿಸಲಿದೆಯಂತೆ.

Facebook Comments

Sri Raghav

Admin