ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ : ಗಿರೀಶ್ ಬಾಪತ್

ಈ ಸುದ್ದಿಯನ್ನು ಶೇರ್ ಮಾಡಿ

Girish--02
ಪುಣೆ,ಜ.12- ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ ಎಂದು ಹೇಳುವ ಮೂಲಕ ಬಿಜೆಪಿ ಸಚಿವ ಗಿರೀಶ್ ಬಾಪತ್ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಇರಿಸುಮುರಿಸು ತರಿಸಿದ್ದಾರೆ. ಮುಂದಿನ ವರ್ಷ ಸರ್ಕಾರ ಬದಲಾಗಲಿದೆ ಈ ಕಾರಣದಿಂಗಾಗಿ ಈ ಸರ್ಕಾರದಿಂದ ಯಾವುದೇ ಕೆಲಸವನ್ನು ಪಡೆಯಲು ಯೋಜಿಸಿರುವವರು ತಮ್ಮ ಬೇಡಿಕೆಗಳನ್ನು ಕಠಿಣವಾಗಿ ಅನುಸರಿಸಬೇಕು ಎಂದು ಗಿರೀಶï ಬಾಪತï ಹೇಳಿರುವ ವಿಡಿಯೋ ಇದೀಗ ವೈರಲï ಆಗಿದೆ.

ಜ.6ರಂದು ಪುಣೆಯಲ್ಲಿ ನಡೆದಿದ್ದ ದಾಳಿಂಬೆ ರೈತರ ಸಭೆಯಲ್ಲಿ ಬಾಪತ್ ಈ ಹೇಳಿಕೆ ನೀಡಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಾಲ್ ಆಗಿದೆ. ದಾಳಿಂಬೆ ರೈತರ ವಿವಿಧ ಬೇಡಿಕೆಗಳ ಕುರಿತು ಇದೇ ತಿಂಗಳ ಅಂತ್ಯದಲ್ಲಿ ಚರ್ಚೆ ನಡೆಸುವುದಾಗಿ ಭಾಪತ್ ಭರವಸೆ ನೀಡಿದ್ದು, ಈ ಕುರಿತು ಮುಖ್ಯಮಂತ್ರಿ ಫಡ್ನವಿಸ್ ಮತ್ತು ಕೃಷಿ ಸಚಿವರೊಂದಿಗೆ ಚರ್ಚಿಸುವುದಾಗಿ ಅವರು ಹೇಳಿದ್ದಾರೆ.

Facebook Comments

Sri Raghav

Admin