ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡುತ್ತಿದ್ದ ಗಗನಸಖಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

Jet-Airways--01
ನವದೆಹಲಿ,ಜ.12-ವಿಮಾನದಲ್ಲೇ ಗಗನಸಖಿಯೊಬ್ಬಳು ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಗಗನಸಖಿ ಜೆಟ್‍ಏರ್‍ವೇಸ್ ವಿಮಾನದಲ್ಲಿ 3.21 ಕೋಟಿ ರೂ. ಮೌಲ್ಯದ ಯುಎಸ್ ಡಾಲರ್ ಹಣವನ್ನು ಕಳ್ಳಸಾಗಣೆ ಮಾಡಿದ್ದು, ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದು, ಕೂಡಲೇ ಆಕೆಯನ್ನು ಬಂಧಿಸಲಾಗಿದೆ. ಗಗನಸಖಿಯನ್ನು ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆ ವಜಾ ಮಾಡಿದೆ. ಇನ್ನು ಹಾಂಗ್‍ಕಾಂಗ್‍ನಿಂದ ದೆಹಲಿಗೆ ಬಂದ ಜೆಟ್ ವಿಮಾನದಲ್ಲಿ ಯುಎಸ್ ಡಾಲರ್‍ನ್ನು ಗಗನಸಖಿ ಸಾಗಿಸಿದ್ದಳು ಎಂದು ಹೇಳಲಾಗಿದೆ.

Facebook Comments

Sri Raghav

Admin