ವಿಧಾನಪರಿಷತ್ ಸಭಾಪತಿ ಶಂಕರಮೂರ್ತಿ ಅವರನ್ನು ಭೇಟಿ ಮಾಡಿದ ಮಾರಿಷಸ್ ಉಪರಾಷ್ಟ್ರಪತಿ

ಈ ಸುದ್ದಿಯನ್ನು ಶೇರ್ ಮಾಡಿ

Shankarmurty--02

ಬೆಂಗಳೂರು,ಜ.12-ಭಾರತದೊಂದಿನ ನಮ್ಮ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ತಾವು ಇಚ್ಚಿಸುವುದಾಗಿ ಮಾರಿಷಸ್ ಗಣರಾಜ್ಯದ ಉಪರಾಷ್ಟ್ರಪತಿ ಪರಮಶಿವಂ ಪಿಳ್ಳೈ ವಿಯಪೂರಿ ಅಭಿಪ್ರಾಯಪಟ್ಟರು. ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರನ್ನು ಭೇಟಿ ಮಾಡಿದ ವೇಳೆ ಮಾತನಾಡಿದ ಅವರು, ಮಾರಿಷಸ್ ಭಾರತದೊಂದಿಗೆ ಹೊಂದಿರುವ ಸಂಬಂಧವನ್ನು ಮತ್ತಷ್ಟು ಬಲಿಷ್ಟಗೊಳಿಸಲಿದ್ದೇವೆ. ಈ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳ ಸಂಬಂಧ ಇನ್ನಷ್ಟು ಬೆಳೆಯಲಿದೆ ಎಂದರು.

ಶಿಕ್ಷಣ, ವ್ಯಾಪಾರಕ್ಕೆ ನಾವು ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದ ಅವರು, ನಮ್ಮಲ್ಲಿ ಬಹಳಷ್ಟು ಭಾರಿ ಮಳೆಗಳು ಆದರೂ ನೆರೆ ಹಾವಳಿಯಂತಹ ಸಮಸ್ಯೆ ಇರುವುದಿಲ್ಲ. ಕಾರಣ ಅಲ್ಲಿ ಹೆಚ್ಚು ಕಾಲುವೆಗಳನ್ನು ನಿರ್ಮಿಸಿದ್ದೇವೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆಗಳು ವೃದ್ದಿಸುವುದಿಲ್ಲ ಎಂದರು. ಇಂದು ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಹೊರಹೊಮ್ಮುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೈಸೂರಿನ ಜೆಎಸ್‍ಎಸ್‍ನಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅವರು ಆಹ್ವಾನದ ಮೇರೆಗೆ ಶಂಕರ್‍ಮೂರ್ತಿ ಅವರನ್ನು ಭೇಟಿ ಮಾಡಿದ್ದರು.  ಈ ವೇಳೆ ಮೈಸೂರು ಪೇಟ ತೊಡಿಸಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ವಿಧಾನಪರಿಷತ್ ಇತಿಹಾಸ ಒಳಗೊಂಡ ಡೈರಿಯನ್ನು ಶಂಕರಮೂರ್ತಿ ನೀಡಿದರೆ, ಮಾರಿಷಸ್ ಇತಿಹಾಸದ ಡೈರಿಯನ್ನು ಪರಮಶಿವಂ ಪಿಳೈ ಇವರಿಗೆ ನೀಡಿದರು.

Facebook Comments

Sri Raghav

Admin