ಸಿದ್ದರಾಮಯ್ಯನವರಿಗೆ ಸೋಲಿನ ಭಯ ಕಾಡುತ್ತಿದೆ : ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

C-TRavi
ಚಿಕ್ಕಮಗಳೂರು,ಜ.12-ಚುನಾವಣೆಯಲ್ಲಿ ಸೋಲುವ ಭಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಈ ಭೀತಿಯಿಂದಲೇ ಅವರ ಬುದ್ದಿ ಮತ್ತು ನಾಲಿಗೆ ಸಂಪರ್ಕ ಕಳೆದುಕೊಂಡ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಶಾಸಕ ಸಿ.ಟಿ.ರವಿ ಕುಟುಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಆರ್‍ಎಸ್‍ಎಸ್, ಭಜರಂಗದಳ ಉಗ್ರಗಾಮಿಗಳು ಎಂದು ಆರೋಪಿಸಿದ್ದಾರೆ. ಈ ರೀತಿ ಆರೋಪಿಸಲು ಸಾಕ್ಷ್ಯಾಧಾರಗಳಿವೆಯೇ? ಇದ್ದರೆ ಕ್ರಮ ಏಕೆ ಕೈಗೊಂಡಿಲ್ಲ. ಸುಳ್ಳು ಹೇಳಿಕೆ ನೀಡಿರುವ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು ಎಂದರು.  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾತಿ ಹೆಸರಿನಲ್ಲಿ ವಿಭಜನೆ ರಾಜಕಾರಣ ಮಾಡುತ್ತಿದೆ. ಕೇಂದ್ರದಲ್ಲಿ ಮತ್ತು 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದ್ದು, ರಾಷ್ಟ್ರಪತಿ, ಉಪರಾಷ್ಟ್ರಪತಿ , ಪ್ರಧಾನಿ, ಆರ್‍ಎಸ್‍ಎಸ್ ಸ್ವಯಂ ಸೇವಕರು, ಬಿಜೆಪಿ ಪ್ರಜಾಭಪ್ರಭುತ್ವದಲ್ಲಿ ನಂಬಿಕೆ ಹೊಂದಿರುವ ಪಕ್ಷ. ಬ್ಯಾಲೆಡ್ ಮೂಲಕ ಅಧಿಕಾರಕ್ಕೆ ಬಂದಿದ್ದೇವೆ ಎಂದರು.

ಬುಲೆಟ್, ಬಾಂಬ್ ಮೇಲೆ ನಮಗೆ ನಂಬಿಕೆ ಇಲ್ಲ. ದೇಶದ ಇತಿಹಾಸ ಅವಲೋಕಿಸಿದರೆ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷವು ಬುಲೆಟ್ ಮತ್ತು ಬಾಂಬ್ ಮೇಲೆ ನಂಬಿಕೆ ಇಟ್ಟು ರಾಜಕಾರಣ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ 2004ರ ಚುನಾವಣೆಯಲ್ಲಿ ನಕ್ಸಲರೊಂದಿಗೆ ಒಪ್ಪಂದ ಮಾಡಿಕೊಂಡಿದೆ, ಪಂಜಾಬ್‍ನಲ್ಲಿ ಅಕಾಲಿ ದಳ ಮಣಿಸಲು 70 ದಶಕದಲ್ಲಿ ಬಿಂದ್ರನ್ ವಾಲ ಅವರನ್ನು ಬೆಳೆಸಿದರು. ಇಂದಿರಾಗಾಂಧಿಯವರೇ ಕೊನೆಗೆ ಅವರಿಗೆ ಬಲಿಯಾದರು.
ಮೂಲಭೂತ ವಾದಿ ವಿಚಾರ ಹೊಂದಿರುವ ಮುಸ್ಲಿಂ ಲೀಗ್ ಜೊತೆ ಕೇರಳದಲ್ಲಿ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

2015ರ ಜೂನ್ 1ರಂದು ನಡೆದ ಅಧಿವೇಶನದಲ್ಲಿ ಕೆಎಫ್‍ಡಿ , ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವಾಪಸ್ ಪಡೆದದ್ದು ಯಾಕೆ ಎಂದು ಪ್ರಶ್ನಿಸಿದರು. ತಾಲಿಬಾನ್‍ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದೀರಿ ಎಂದು ಆರೋಪಿಸಿದರು. 2015ರ ಜೂನ್ ನಂತರ 24 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ. ಬಿಜೆಪಿ ಮತ್ತು ಆರ್‍ಎಸ್‍ಎಸ್ ಎರಡಕ್ಕೂ ಪ್ರಜಾಪ್ರಭುತ್ವ ಮಾರ್ಗದಲ್ಲಿ ಎದುರಿಸಲಾಗದೆ ಅನ್ಯಮಾರ್ಗದಲ್ಲಿ ಎದುರಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

Facebook Comments

Sri Raghav

Admin