ಸೆಕ್ಯೂರಿಟಿ ಗಾರ್ಡ್ ನೇಮಿಸಿಕೊಳ್ಳುವ ಮೊದಲು ಪೂರ್ವಾಪರ ಪರಿಶೀಲಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Security--01

ಬೆಂಗಳೂರು, ಜ.12- ಮನೆಗಳಿಗೆ ಅಥವಾ ಕಚೇರಿಗಳಿಗೆ ಖಾಸಗಿ ಸೆಕ್ಯೂರಿಟಿ ಗಾರ್ಡ್‍ಗಳನ್ನು ನೇಮಿಸಿಕೊಳ್ಳುವಾಗ ಅವರ ಪೂರ್ವಾಪರಗಳನ್ನು ಪರಿಶೀಲಿಸಬೇಕು ಎಂದು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಶರಣಪ್ಪ ತಿಳಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಕೆಲಸ ಕೇಳಿಕೊಂಡು ಬರುವ ವ್ಯಕ್ತಿಯ ಹಿನ್ನೆಲೆ ಬಗ್ಗೆ ಸ್ಥಳೀಯ ಪೊಲೀಸರಿಂದ ಪರಿಶೀಲನೆ ಮಾಡಿಸಿ ಪರಿಶೀಲನಾ ಪತ್ರ ಪಡೆಯುವುದು ಉತ್ತಮವೆಂದು ಅವರು ಕಿವಿಮಾತು ಹೇಳಿದ್ದಾರೆ.

ಸೆಕ್ಯೂರಿಟಿ ಗಾರ್ಡ್‍ಗಳನ್ನು ನೇಮಿಸಿಕೊಳ್ಳುವಾಗ ಆತನ ಖಾಯಂ ಹಾಗೂ ತಾತ್ಕಾಲಿಕ ವಿಳಾಸವನ್ನು ಖುದ್ದು ಪರಿಶೀಲನೆ ಮಾಡಿ ಆತನ ಸಂಬಂಧಿಕರು ಹಾಗೂ ಪರಿಚಯವಿರುವವರ ವಿಳಾಸಗಳು, ದೂರವಾಣಿ ನಂಬರ್‍ಗಳನ್ನು ಪಡೆಯುವುದರ ಜತೆಗೆ ಆತನ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಇಟ್ಟುಕೊಳ್ಳಬೇಕು.  ಈ ಹಿಂದೆ ಕಾರ್ಯನಿರ್ವಹಿಸಿ ಬಿಟ್ಟು ಬಂದಿದ್ದಲ್ಲಿ ಅಲ್ಲಿ ಆತನ ನಡವಳಿಕೆ ಹಾಗೂ ಕರ್ತವ್ಯ ಪಾಲನೆ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ ಎಂದು ಅವರು ನಾಗರಿಕರಿಗೆ ಕಿವಿಮಾತು ಹೇಳಿದ್ದಾರೆ.

Facebook Comments

Sri Raghav

Admin