6 ಮಕ್ಕಳ ಹೆತ್ತ ಮಹಾಮಾತೆ..! ಆದರೂ ಬೆಂಬಿಡಲಿಲ್ಲ ದುರದೃಷ್ಟ….!

ಈ ಸುದ್ದಿಯನ್ನು ಶೇರ್ ಮಾಡಿ

Babies--02
ಮೇದಿನಿನಗರ(ಜಾರ್ಖಂಡ್), ಜ.12-ಮಹಿಳೆಯೊಬ್ಬಳು ಆರು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಪ್ರಸಂಗ ಜಾರ್ಖಂಡ್‍ನ ಮೇದಿನಿನಗರದಲ್ಲಿ ನಡೆದಿದೆ. ದುರದೃಷ್ಟವಶಾತ್ ಎಲ್ಲ ಶಿಶುಗಳು ಜನಿಸಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿವೆ. ಗರ್‍ವಾ ಜಿಲ್ಲೆಯ ಖಾರ್‍ಸೋಟಾ ಗ್ರಾಮದ ನಿವಾಸಿ ಸರಿತಾ ದೇವಿ(32) ಗರ್ಭ ಧರಿಸಿದ್ದರು. ಐದನೇ ತಿಂಗಳಿನಲ್ಲಿ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ನಿನ್ನೆ ಆಕೆಯನ್ನು ಪಲಮು ಜಿಲ್ಲೆಯ ಮೇದಿನಿ ನಗರದ ಖಾಸಗಿ ನರ್ಸಿಂಗ್ ಹೋಂಗೆ ದಾಖಲಿಸಲಾಯಿತು. ಪ್ರಸೂತಿ ತಜ್ಞರು ಸರಿತಾ ದೇವಿಗೆ ಹೆರಿಗೆ ಮಾಡಿಸಿದ ನಂತರ ಒಟ್ಟು ಆರು ಶಿಶುಗಳು ಜನ್ಮತಾಳಿದವು. ಇವುಗಳಲ್ಲಿ ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳು. ಆದರೆ, ಅವಧಿಗೆ ಮುನ್ನ ಹುಟ್ಟಿದ ಇವು ಬದುಕುಳಿಯಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮಹಿಳೆಯ ಸ್ಥಿತಿಯೂ ಗಂಭೀರವಾಗಿದ್ದು, ಆಕೆಯನ್ನು ಉಳಿಸಲು ವೈದ್ಯರು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ.

Facebook Comments

Sri Raghav

Admin