ಇಲ್ಯಾಸ್ ಹತ್ಯೆ ಕುರಿತು ಖಾದರ್ ಕೊಟ್ಟ ಪ್ರತಿಕ್ರಿಯೆಯೇನು..? 

ಈ ಸುದ್ದಿಯನ್ನು ಶೇರ್ ಮಾಡಿ

UT-Khadara
ಧಾರವಾಡ, ಜ.13- ಕಾಂಗ್ರೆಸ್ ಪಕ್ಷ ಯಾವುದೇ ಸಮಾಜ ಘಾತುಕರಿಗೂ ರಕ್ಷಣೆ ನೀಡುವುದಿಲ್ಲ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ ರೌಡಿ ಇಲಿಯಾಸ್ ಹತ್ಯೆ ಪ್ರಕರಣ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಇಲಿಯಾಸ್ ಕಾಂಗ್ರೆಸ್ ಪಕ್ಷ ಸೇರಲು ಬಂದಿದ್ದ. ಅವನ ಹಿನ್ನೆಲೆ ತಿಳಿದು ಪಕ್ಷಕ್ಕೆ ಸೇರಿಸಿಕೊಂಡಿರಲಿಲ್ಲ. ಆದರೆ ನಮಗಾಗದವರು ಅವನನ್ನು ಆನ್‍ಲೈನ್ ಮೂಲಕ ಹೆಸರು ಸೇರಿಸಿದ್ದರು ಎಂದು ತಿಳಿಸಿದರು.  ನಂತರ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ. ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರಿಂದ ಉಪಾಧ್ಯಕ್ಷನಾಗಿದ್ದ. ಅವನ ಕಾರ್ಯಚಟುವಟಿಕೆ ಗಮನಿಸಿ ದೂರ ಇಡಲಾಗಿತ್ತು ಎಂದು ಹೇಳಿದರು. ಕಾನೂನುಬಾಹಿರ ಕೆಲಸ ಮಾಡುವ ಯಾರಿಗೂ ಕಾಂಗ್ರೆಸ್ ಬೆಂಬಲ ನೀಡುವುದಿಲ್ಲ ಎಂದು ಹೇಳಿದ ಅವರು, ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.

Facebook Comments

Sri Raghav

Admin