ಕತ್ತು ಹಿಸುಕಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ನಾದಿನಿಯ ಕೊಂದ ಭಾವ

ಈ ಸುದ್ದಿಯನ್ನು ಶೇರ್ ಮಾಡಿ

Murder--02
ನೆಲಮಂಗಲ,ಜ.13-ಕ್ಷುಲ್ಲಕ ವಿಚಾರವಾಗಿ ಭಾವನೇ ನಾದನಿಯ ಕತ್ತು ಹಿಸುಕಿ ತಲೆ ಮೇಲೆ ಕಲ್ಲು ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.   ಲಕ್ಕಸಂದ್ರ ಗ್ರಾಮದ ಪದ್ಮ(40) ಕೊಲೆಯಾದ ನತದೃಷ್ಟೆ. ಲಕ್ಕಸಂದ್ರದಲ್ಲಿ ವಾಸವಾಗಿದ್ದ ಪದ್ಮ ಅವರ ಪತಿ 15 ವರ್ಷಗಳ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ, ತದನಂತರ ಅನಾರೋಗ್ಯದಿಂದ ಮೃತಪಟ್ಟಿದ್ದ. ಪದ್ಮ ಜೀವನೋಪಾಯಕ್ಕಾಗಿ ಅಂದಿನಿಂದ ಗ್ರಾಮದ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಪದ್ಮಾ ಅವರ ಅಕ್ಕ-ಭಾವ ತುಮಕೂರಿನಲ್ಲಿ ವಾಸವಾಗಿದ್ದು ಆಗಿಂದಾಗ್ಗೆ ಭಾವ ಗಂಗಗುಡ್ಡಯ್ಯ ಲಕ್ಕಸಂದ್ರಕ್ಕೆ ಬಂದು ಹೋಗುತ್ತಿದ್ದನು. ನಿನ್ನೆ ಸಂಜೆ 6 ಗಂಟೆಯಲ್ಲಿ ನಾದಿನಿ ಮನೆಗೆ ಗಂಗಗುಡ್ಡಯ್ಯ ಬಂದಿದ್ದಾನೆ. ರಾತ್ರಿವರೆಗೂ ಇಲ್ಲೇ ಇದ್ದ ಈತ ನಾದಿನಿ ಜೊತೆ ಕ್ಷುಲ್ಲಕ ವಿಚಾರವಾಗಿ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಪದ್ಮಾ ಅವರ ಕುತ್ತಿಗೆ ಹಿಸುಕಿ ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ತುಮಕೂರಿಗೆ ತೆರಳಿದ್ದಾನೆ.

ತಡರಾತ್ರಿ ಪತಿ ಮನೆಗೆ ಬಂದಿದ್ದನ್ನು ಪತ್ನಿ ಪ್ರಶ್ನಿಸಿದಾಗ ನಿನ್ನ ತಂಗಿಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.  ಈ ವಿಷಯ ತಿಳಿದು ಗಾಬರಿಯಾಗಿ ತಕ್ಷಣ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.  ಸುದ್ದಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಆರೋಪಿಯನ್ನು ಬಂಧಿಸಲು ತುಮಕೂರಿಗೆ ತೆರಳಿದ್ದಾರೆ.

Facebook Comments

Sri Raghav

Admin