ಟಾಟಾ ಕೆಮಿಕಲ್ಸ್ ಖರೀದಿಸಿದ ಯಾರಾ ಇಂಟರ್‍ನ್ಯಾಷನಲ್ ಕಂಪನಿ

ಈ ಸುದ್ದಿಯನ್ನು ಶೇರ್ ಮಾಡಿ

Tata
ನವದೆಹಲಿ, ಜ.13- ವಿಶ್ವದ ಮುಂಚೂಣಿ ರಾಸಾಯನಿಕ ಗೊಬ್ಬರ ವಿತರಕ ಕಂಪೆನಿಯಾದ ಯಾರಾ ಇಂಟರ್‍ನ್ಯಾಷನಲ್ ಎಎಸ್‍ಎ ಸದೂರು 2682 ಕೋಟಿ ರೂ. ವ್ಯವಹಾರದಲ್ಲಿ ಟಾಟಾ ಕೆಮಿಕಲ್ಸ್ ಅನ್ನು ಖರೀದಿಸಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಭಾರತದಲ್ಲಿನ ರೈತರ ಜೀವನ ಮಟ್ಟವನ್ನು ಹೆಚ್ಚಿಸುವ ಮತ್ತು ಕೃಷಿ ಕ್ಷೇತ್ರದಲ್ಲಿ ಆಧುನಿಕತೆಯನ್ನು ತರುವ ಒಟ್ಟಾರೆ ಆರ್ಥಿಕ ಪ್ರಗತಿಗೆ ಈ ಸ್ವಾಧೀನ ಪ್ರಕ್ರಿಯೆ ನಮಗೆ ಆಶಾದಾಯಕವಾಗಿದೆ ಎಂದು ಯಾರಾ ಕಂಪೆನಿಯ ಅಧ್ಯಕ್ಷ ಹಾಗೂ ಸಿಇಒ ಎಸ್‍ವಿಎನ್ ಟೋರಿ ಓಸೀಲ್‍ದರ್ ತಿಳಿಸಿದರು.

ಈಗಾಗಲೇ 60 ದೇಶದಲ್ಲಿ ಯಾರಾ ಕಂಪೆನಿ ಇದ್ದು 160 ರಾಷ್ಟ್ರದಲ್ಲಿ ತನ್ನ ಉತ್ಪಾದನೆಯನ್ನು ಮಾರಾಟ ಮಾಡುತ್ತಿದೆ. ಇದನ್ನು ಮತ್ತಷ್ಟು ವಿಸ್ತರಿಸುವುದರ ಗುರಿ ಇದೆ. ಭಾರತದಲ್ಲಿ ನಮಗೆ ಹೆಚ್ಚಿನ ವಿಶ್ವಾಸವಿದೆ ಎಂದರು.

Facebook Comments

Sri Raghav

Admin